Advertisement
ನೆಲ್ಲಿಕಟ್ಟೆಯಿಂದ ಮೇಗದ್ದೆಗೆ ಹೋಗುವ ರಸ್ತೆಯ ದೇವಸ್ಥಾನ ಬೆಟ್ಟು ಶೇಡಿಕಂತ ರಸ್ತೆ ಬದಿಯಿದ್ದ ಬೈನೆ ಮರವನ್ನು ಕಾಡಾನೆ ರಸ್ತೆಗೆ ದೂಡಿ ಹಾಕಿದ್ದು, ಬೆಳಗ್ಗಿನ ಹೊತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ನಾಡ್ಪಾಲು ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಹಾಗೂ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Related Articles
Advertisement
ಅರಣ್ಯ ಪರಿಸರದಲ್ಲಿ ಆನೆ ಓಡಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ಜಮೀನನ್ನು ಹಾನಿ ಮಾಡಿದ ಘಟನೆ ನಡೆದಿಲ್ಲ. ಇಲಾಖೆ ಆನೆಯ ಚಲನವಲನನ್ನು ಗಮನಿಸುತ್ತಿದೆ. ಸಮಸ್ಯೆ ಉಲ್ಬಣಗೊಂಡಲ್ಲಿ ಕ್ರಮ ಕೈಗೊಳ್ಳುವುದಾಗಿ ವನ್ಯಜೀವಿ ಭಾಗದ ಅರಣ್ಯ ಅಧಿಕಾರಿ ಚಿದಾನಂದಪ್ಪ ತಿಳಿಸಿದ್ದಾರೆ.