Advertisement

ಹೆಬ್ರಿ ತಾಲೂಕು ಆಡಳಿತ ಸೌಧ: ಇಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ

01:42 AM Jun 01, 2022 | Team Udayavani |

ಹೆಬ್ರಿ: ನೂತನ ಹೆಬ್ರಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕು ಆಡಳಿತ ಸೌಧವನ್ನು ಜೂ. 1ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌. ಅಶೋಕ್‌ ಉದ್ಘಾಟಿಸಲಿದ್ದಾರೆ.

Advertisement

ಸಚಿವ ವಿ. ಸುನಿಲ್‌ ಕುಮಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಡಾ| ಅಶ್ವತ್ಥ ನಾರಾಯಣ, ವಿ. ಸೋಮಣ್ಣ, ಎನ್‌. ಮುನಿರತ್ನ ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿ ಕೊಠಡಿಗಳ ಹಾಗೂ 1.5 ಕೋಟಿ ವೆಚ್ಚದ ಹೆಬ್ರಿ ಸುಸಜ್ಜಿತ ಬಸ್‌ ನಿಲ್ದಾಣ ಕಾಮಗಾರಿಗಳ ಶಂಕು ಸ್ಥಾಪನೆ ನಡೆಯಲಿದೆ.

ವಿಶೇಷ ಕಾರ್ಯಕ್ರಮ
40 ವರ್ಷಗಳ ನಿರಂತರ ಪರಿ ಶ್ರಮದ ಫಲವಾಗಿ ಹೆಬ್ರಿ ತಾಲೂಕು ರಚನೆಗೊಂಡಿದೆ. ನೂತನ ತಾಲೂಕು ಕಟ್ಟಡ ಜತೆ ನಾಡ ಕಚೇರಿ ಕೂಡ ರೂಪು ಗೊಂಡಿದ್ದು ಸಂಭ್ರಮವನ್ನು ಇಮ್ಮಡಿ ಗೊಳಿಸಲು ತಾಲೂಕು ಆಡಳಿತ ಎಲ್ಲರನ್ನು ಒಟ್ಟುಗೂಡಿಸಿಕೊಂಡು ತಾಲೂಕು ಆಡಳಿತ ಸೌಧ ಉದ್ಘಾಟನೆಯನ್ನು ವಿಶೇಷವಾಗಿ ಸಂಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಮೂಡುಬಿದಿರೆಯ ವಿದ್ಯಾಗಿರಿ ಸಜ್ಜು: ರೈತ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಂವಾದ
ಮೂಡುಬಿದಿರೆ: ರೈತ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ “ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಯನ್ವಯ ದ.ಕ. ಜಿಲ್ಲೆಯಲ್ಲಿ 22,000 ಮಂದಿ ವಿದ್ಯಾರ್ಥಿಗಳಿಗೆ ಈಗಾಗಲೇ 8 ಕೋಟಿ ರೂ. ವಿದ್ಯಾರ್ಥಿ ವೇತನ ಸಂದಾಯವಾಗಿದ್ದು ಈ ಫಲಾನುಭವಿಗಳ ಜತೆ ಮುಖ್ಯಮಂತ್ರಿ ಬಸವರಾಜ ಎಸ್‌. ಬೊಮ್ಮಾಯಿ ಅವರು ಸಂವಾದ ನಡೆಸಲು ಮೂಡುಬಿದಿರೆಗೆ ಬುಧವಾರ ಮಧ್ಯಾಹ್ನ 2 ಗಂಟೆಗೆ ಆಗಮಿಸಲಿದ್ದಾರೆ.

ಈಗಾಗಲೇ ಡಿಸಿ ಡಾ| ಕೆ.ವಿ. ರಾಜೇಂದ್ರ, ಜಿ.ಪಂ. ಸಿಇಒ ಡಾ| ಕುಮಾರ್‌, ಸಚಿವ ವಿ. ಸುನಿಲ್‌ ಕುಮಾರ್‌, ಶಾಸಕ ಉಮಾನಾಥ ಕೋಟ್ಯಾನ್‌ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿ ದ್ದಾರೆ. 12,000 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next