Advertisement

ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಜೀರ್ಣೋದ್ಧಾರಕ್ಕೆ ಕೈಜೋಡಿಸಿ

04:30 PM Mar 30, 2017 | |

ಹೆಬ್ರಿ : ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳ ಅತ್ಯಂತ ಪ್ರಾಚೀನ ಕ್ಷೇತ್ರ. ಸುಮಾರು 600 ವರ್ಷ ಇತಿಹಾಸವುಳ್ಳ ದೇವಸ್ಥಾನ ಇದೀಗ ಸುಮಾರು 4.5ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ. ಮಾ.30ರಿಂದ ಏ.10ರವರೆಗೆ ‌ ಅಷ್ಟಬಂಧ ಸಹಿತ ಶ್ರೀ ದೇವರ ಪುನರ್‌ ಪ್ರತಿಷ್ಠೆ, ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

Advertisement

      ಈ ಮಹಾತ್ಕಾರ್ಯಕ್ಕೆ ಊರ ಪರವೂರ ಮಹನೀಯರು ಉದಾರ ದೇಣಿಗೆ ನೀಡಿ ದೇವಸ್ಥಾನದ ಜೀಣೋದ್ಧಾರಕ್ಕೆ  ಕೈಜೋಡಿಸಿ ಶಾಶ್ವತ ಪುಣ್ಯ ಭಾಜನರಾಗಬೇಕಾಗಿ ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ.  ಧನ ಸಹಾಯ ನೀಡುವ ಉದಾರ ಭಕ್ತಾಭಿಮಾನಿಗಳು ಕೆಳಕಂಡ ಉಳಿತಾಯ ಖಾತೆಗೆ ಜಮೆ ಮಾಡಬಹುದಾಗಿದೆ.

ಸಿಂಡಿಕೇಟ್‌ ಬ್ಯಾಂಕ್‌ : S.B,A/c No : 01262200077950
ವಿಜಯಬ್ಯಾಂಕ್‌       :S.B,A/c No : 108001010010181
ಕೆನರಾ ಬ್ಯಾಂಕ್‌       :S.B,A/c No : 2502101013556
ಕಾರ್ಪೋರೇಶನ್‌ ಬ್ಯಾಂಕ್‌ : CORP-0000225 S.B- 01008550

ಹೆಬ್ಬೇರಿ

ಮಲೆನಾಡ ತಪ್ಪಲಿನಲ್ಲಿರುವ ಹೆಬ್ರಿ ಒಂದು ದೊಡ್ಡ ವ್ಯಾಪಾರಿ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರಕೃತಿದತ್ತ ದಟ್ಟ ಕಾನನದ ನಡುವೆ ಸುಂದರ ನಗರವಾಗಿ ಬೆಳೆಯುತ್ತಿರುವ ಹೆಬ್ರಿಯ ಇತಿಹಾಸ ಬಹಳ ಪುರಾತನವಾಗಿದ್ದು ಹಿಂದೆ ಹೆಬ್ಬೇರಿ ಎಂದು ಕರೆಯುತ್ತಿದ್ದರು. ಗ್ರಾಮ ದೇವರಾದ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ದೊಡ್ಡ ನಗಾರಿ ಒಂದು ಇದ್ದು ,ಅನ್ಯರಾಜರ ಅಕ್ರಮಣ ಸಂದರ್ಭದಲ್ಲಿ ವಜ್ರ ವೈಡುರ್ಯ ಸಂಪತ್ತೆಲ್ಲವನ್ನು  ದೊಡ್ಡದಾದ ಬೇರಿಯೊಳಗೆ ತುಂಬಿಸಿ ದೇವಳದ ಸಮೀಪದಲ್ಲಿರುವ ಕೆರೆಯೊಳಗೆ ಹಾಕಲಾಗಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ .ಹಿರಿದಾದ ಬೇರಿಯಿಂದಲೇ ಊರಿನ ಹೆಸರು ಹೆಬ್ಬೇರಿಯಾಗಿ ತದಾನಂತರ ಹೆಬ್ರಿ ಆಯಿತು ಎಂಬುದು ಪ್ರತೀತಿ.  

Advertisement

ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next