ಹೆಬ್ರಿ: ಸಾರ್ವಜನಿಕರು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಏನೆಲ್ಲ ಸುರಕ್ಷತೆ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹಾಬಲ ಶೆಟ್ಟಿ ಅವರು ಹೆಬ್ರಿ ಬಸ್ ನಿಲ್ದಾಣದ ವಠಾದಲ್ಲಿ ಸಾರ್ವಜನಿಕರಿಗೆ ಕರಪತ್ರ ನೀಡಿ ಮಾಹಿತಿ ನೀಡಿದರು.
ಸುರಕ್ಷತೆ ಕ್ರಮಗಳು
ವಾಹನ ಚಲಾಯಿಸುವವರು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬೇಕು. ಕಾರು ಚಲಾಯಿಸುವವರು ಸೀಟ್ ಬೆಲ್r ಹಾಕುವುದು, ಜನ ನಿಬಿಡ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳ ಬಳಿ ಪಾದಚಾರಿ ಇರುವೆಡೆ ನಿಧಾನವಾಗಿ ಚಲಿಸುವುದು, ಬೈಕ್ ಚಲಾಯಿಸುವವರು ಹಾಗೂ ಹಿಂಬದಿ ಸವಾರರು ಹೆಲ್ಮಟ್ ಕಡ್ಡಾಯವಾಗಿ ಧರಿಸಿಕೊಳ್ಳುವುದು, ಹದಿನೆಂಟು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡದಿರುವುದು, ಗೂಡ್ಸ್ ವಾಹನಗಳಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರನ್ನು ಸಾಗಿಸಬಾರದು, ಶಾಲಾ ವಾಹನಗಳಲ್ಲಿ ಹಾಗೂ ಆಟೋ ರಿಕ್ಷಾಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಸಂಖ್ಯೆ ಮಕ್ಕಳನ್ನು ಕಳುಹಿಸಬಾರದು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸದಿರುವುದು, ಸೇತುವೆಗಳಲ್ಲಿ ತಿರುವು ರಸ್ತೆಗಳಲ್ಲಿ ವಾಹನಗಳನ್ನು ಓವರ್‌ಟೆಕ್ ಮಾಡದಿರುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದು, ಪ್ರತೀ 7 ತಿಂಗಳಿಗೊಮ್ಮೆ ವಾಹನದ ಪ್ರದೂಷಣೆಯನ್ನು ಪರೀಕ್ಷಿಸಿಕೊಳ್ಳುವುದು, ವಾಹನದಲ್ಲಿ ಪ್ರಥಮ ಚಿಕಿತ್ಸಾ ಕಿಟ್ಅನ್ನು ಕಡ್ಡಾಯವಾಗಿ ಇರಿಸಿಕೊಳ್ಳುವುದು ಇತ್ಯಾದಿ ವಿಚಾರಗಳನ್ನು ಮಾಹಿತಿ ಪತ್ರದಲ್ಲಿ ತಿಳಿಸಲಾಗಿದೆ.