Advertisement
ಸುಮಾರು 12 ಗ್ರಾಮ ಪಂಚಾ ಯತ್‌ಗಳನ್ನು ಒಳಗೊಂಡು 35 ಬೀಟ್ ಪ್ರದೇಶಗಳ ವ್ಯಾಪ್ತಿಗೆ ಬರುವ ಹೆಬ್ರಿ ಪೊಲೀಸ್ ಠಾಣೆ ಈಗ ನಗರದಿಂದ ದೂರವಾಗಿ ಕಾಡು ಪ್ರದೇಶದಲ್ಲಿದೆ. ಠಾಣೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೀದಿ ದೀಪಗಳೂ ಇಲ್ಲ. ಒಂದು ರೀತಿಯಲ್ಲಿ ಠಾಣೆಗೇ ಭದ್ರತೆ ಇಲ್ಲದಂತಾಗಿದೆ.
ಈ ಹಿಂದೆ ಹೆಬ್ರಿ ಪಟ್ಟಣದಲ್ಲಿದ್ದ ಹಳೆಯ ಠಾಣೆಯಲ್ಲಿ ಸಂಭಾವ್ಯ ನಕ್ಸಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಬಂಕರ್ ವ್ಯವಸ್ಥೆ ಮಾಡಲಾಗಿತ್ತು. ಹೊಸ ಠಾಣೆಯಲ್ಲಿ ಬಂಕರ್ ವ್ಯವಸ್ಥೆಯೂ ಇಲ್ಲ. ಸುಸಜ್ಜಿತ ವಾಹನವೂ ಇಲ್ಲ
ಎನ್‌ಕೌಂಟರ್ ನಡೆದ ಪ್ರದೇಶ ದಟ್ಟಾರಣ್ಯವಾಗಿದ್ದು, ಅಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಿಗೆ ಸಾಮಾನ್ಯ ವಾಹನಗಳು ಸಂಚರಿಸು ವುದು ಅಸಾಧ್ಯ. ಈಗ ಹೆಬ್ರಿ ಠಾಣೆಯಲ್ಲಿರುವ ವಾಹನ ತೀರಾ ಹಳೆಯದಾಗಿದ್ದು, ಅದರಲ್ಲಿ ಸಂಚರಿ ಸಲು ಅಸಾಧ್ಯ. ಆದ್ದರಿಂದ ಠಾಣೆಗೆ ಸುಸಜ್ಜಿತ ವಾಹನ ಅಗತ್ಯವಾಗಿದೆ.
Related Articles
35 ಬೀಟ್‌ಗಳಲ್ಲಿ ಪ್ರತಿ ಬೀಟ್‌ಗೆ ಇಬ್ಬರಂತೆ 70 ಸಿಬಂದಿ ಅಗತ್ಯವಿದ್ದಾರೆ. ತಿಂಗಳಿಗೆ ಎರಡು ಬಾರಿಯಂತೆ ಭೇಟಿ ನೀಡಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಠಾಣೆಗೆ 44 ಸಿಬಂದಿ ಕರ್ತವ್ಯ ನಿರ್ವಹಿಸಬೇಕಾಗಿದ್ದು, ಸಿಬಂದಿ ಕೊರತೆ ಇದೆ. ಈಗ ಎನ್‌ಕೌಂಟರ್ ಕೂಡ ನಡೆದಿರುವುದರಿಂದ ಹೆಚ್ಚಿನ ಸಿಬಂದಿ ಅಗತ್ಯ ಇಲ್ಲಿದೆ. ಅಲ್ಲದೆ ಆದಷ್ಟು ಶೀಘ್ರದಲ್ಲಿ ಇದನ್ನು ಹೆಬ್ರಿ ತಾಲೂಕು ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿದೆ.
Advertisement
ಪಟ್ಟಣದಲ್ಲಿ ಚೆಕ್‌ಪೋಸ್ಟ್ ಅಗತ್ಯವಾಹನದ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಚೆಕ್‌ಪೋಸ್ಟ್ ಅಗತ್ಯವಾಗಿದೆ. ಈ ಬಗ್ಗೆ ಹಿಂದೆ ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಶೀಘ್ರದಲ್ಲೇ ಚೆಕ್‌ಪೋಸ್ಟ್ ತೆರೆಯುವುದಾಗಿ ತಿಳಿಸಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಭದ್ರತೆ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಹೆಬ್ಬಿ ಪಟ್ಟಣದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ನಾಡ್ಪಾಲು ತಿಳಿಸಿದ್ದಾರೆ.