Advertisement

ಹೆಬ್ರಿ: ಸೀತಾನದಿ ಹೊಳೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

11:04 AM Jan 09, 2023 | Team Udayavani |

ಹೆಬ್ರಿ: ಇಲ್ಲಿನ ಸೀತಾನದಿ ಹೊಳೆಗೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜ.8ರ ಸಂಜೆ ನಡೆದಿದೆ.

Advertisement

ದಾವಣಗೆರೆ ಮೂಲದ ಪವನ್.ಎಸ್.ಎಮ್‌ (34) ಮೃತಪಟ್ಟರು .

ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಸೀತಾನದಿ ಹೊಳೆಗೆ ಬಾನುವಾರ ಸಂಜೆ ಸ್ನೇಹಿತರೊಂದಿಗೆ ಸ್ನಾನ ಮಾಡಲು ಹೋದ ಪವನ್, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಕೂಡಲೇ ಹೆಬ್ರಿ ಸರಕಾರ ಆಸ್ಪತ್ರೆ ಕರೆತಂದರೂ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಘಟನೆ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next