Advertisement

ಹೆಬ್ರಿ: ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ಉದ್ಘಾಟನೆ

06:35 AM Aug 02, 2017 | Team Udayavani |

ಹೆಬ್ರಿ: ಗ್ರಾಮೀಣ ಪ್ರದೇಶವಾದ ಹೆಬ್ರಿ ಸುತ್ತಮುತ್ತ ಪ್ರದೇಶದ ಅವಕಾಶ ವಂಚಿತ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹೆಬ್ರಿ ಚಾಣಕ್ಯ ಟ್ಯುಟೋರಿಯಲ್‌ ಕಾಲೇಜು ಈಗಾಗಲೇ ಹಲವಾರು ಪಠ್ಯೇತರ ಚಟುವಟಿಕೆಯನ್ನು ಆರಂಭಿಸಿದ್ದು ಇದೀಗ ಅತೀ ಕಡಿಮೆ ತರಬೇತಿ ಶುಲ್ಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗಳನ್ನು ಆರಂಬಿಸಿರುವುದು ಶ್ಲಾಘನೀಯ. ಇದರ ಪ್ರಯೋಜನ ಪಡೆದುಕೊಂಡು ಈ ಭಾಗದಲ್ಲಿ ಸಂಗೀತ ಪ್ರತಿಭೆಗಳು ಹೊರಬರಲಿ ಎಂದು ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಎಸ್‌. ಮರಕಾಲ ಹೇಳಿದರು.

Advertisement

ಅವರು ಜು. 30ರಂದು ಹೆಬ್ರಿ ಶ್ರೀರಾಮ್‌ ಟವರ್‌ನಲ್ಲಿರುವ ಚಾಣಕ್ಯ ಟ್ಯುಟೋರಿಯಲ್‌ ಕಾಲೇಜಿನಲ್ಲಿ ಆರಂಭಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. 

ಚಾಣಕ್ಯ ಟ್ಯುಟೋರಿಯಲ್‌ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು ಶೆಟ್ಟಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ಶಿಕ್ಷಕಿ ಪೂರ್ಣಿಮಾ ಗೋರೆ ಮಾತನಾಡಿ ಇನ್ನು ಮುಂದೆ ಪ್ರತಿ ರವಿವಾರ ಮಧ್ಯಾಹ್ನ 2ಗಂಟೆಯಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ನಡೆಯಲಿದ್ದು, ತರಬೇತಿ ಪೂರ್ಣಗೊಂಡ ಬಳಿಕ ಪ್ರೌಢ ಶಿಕ್ಷಣ ಮಂಡಳಿಯಿಂದ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಈ ಸಂದರ್ಭ ಪ್ರಶಸ್ತಿ ಪುರಸ್ಕೃತ ಗಾಯಕ ಮುಟ್ಲಪಾಡಿ ಉದಯ ಶೆಟ್ಟಿ, ಸಪ್ತಸ್ವರ ಇದರ ನಿರ್ದೇಶಕ ಉದಯ್‌ ಅಜೆಕಾರು, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕಲಾವಿದ ಪುನಿತ್‌ ಎಸ್‌.  ಮೈಸೂರು, ಮುರಳಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next