Advertisement

ಹೆಬ್ರಿ ಸರಕಾರಿ ಹಾಸ್ಟೆಲ್‌ಗೆ ಸ್ಥಳೀಯಾಡಳಿತ ದಿಢೀರ್‌ ಭೇಟಿ

10:15 PM Sep 16, 2019 | Sriram |

ಹೆಬ್ರಿ: ಆಶ್ರಮ ಶಾಲೆ ಹಾಗೂ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಯ ಆಗರ ಎಂಬ ಆರೋಪದ ಹಿನ್ನೆಲೆಯಲ್ಲಿ ಸೆ. 15ರ ರಾತ್ರಿ ಸ್ಥಳೀಯಾಡಳಿತ ಹಾಗೂ ತಾ.ಪಂ. ಸದಸ್ಯರು ದಿಢೀರ್‌ ಭೇಟಿ ನೀಡಿ ಸಿಬಂದಿ ಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

Advertisement

ಆಶ್ರಮ ಶಾಲೆಯಲ್ಲಿ ಬೇರೆ ಬೇರೆ ಜಿಲ್ಲೆಯ ಸುಮಾರು 56 ವಿದ್ಯಾರ್ಥಿಗಳಿದ್ದು ಮೂಲ ಸೌಲಭ್ಯಗಳ ಕೊರತೆ ಇದೆ. ಶೌಚಾಲಯ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿದ್ಯಾರ್ಥಿಗಳು ಸ್ಥಳೀಯಾಡಳಿತದವರಲ್ಲಿ ಈ ಸಂದರ್ಭ ದೂರಿದ್ದಾರೆ.

ಸರಕಾರಿ ಹಾಸ್ಟೆಲ್‌ನಲ್ಲಿ ಯಾವುದೇ ಮೂಲ ಸೌಲಭ್ಯವಿಲ್ಲದೆ ಮಕ್ಕಳ ಅವಸ್ಥೆ ಯನ್ನು ಗಮನಿಸಿದ ಸ್ಥಳೀಯಾಡಳಿತದ ಅಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದರು.

ಸಮಸ್ಯೆಯ ಗಂಭೀರತೆಯನ್ನು ಅರಿತ ತಾಲೂಕು ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ್‌ ರಾತ್ರಿ 9 ಗಂಟೆ ಹೊತ್ತಿಗೆ ಆಗಮಿಸಿ ಅವ್ಯವಸ್ಥೆಯ ಬಗ್ಗೆ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡು ಅವರ ಮೇಲೆ ಕ್ರಮ ಜರಗಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next