Advertisement
ಹೆಬ್ರಿ ತಾಲೂಕಿನ ಪ್ರಮುಖ ಸರಕಾರಿ ಆಸ್ಪತ್ರೆ ಇದಾಗಿದ್ದು, ದಿನನಿತ್ಯ ನೂರಾರು ರೋಗಿಗಳು ಬರುತ್ತಾರೆ. 2 ದಿನಗಳಿಂದ ಪರಿಸರದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಗೂ ಆರೋಗ್ಯ ತಪಾಸಣೆಯನ್ನು ಇದೇ ಸಿಬಂದಿ ಮಾಡಿದ್ದು, ಮಕ್ಕಳ ಪೋಷಕರು ಭೀತರಾಗಿದ್ದಾರೆ.
ಪಡುಬಿದ್ರಿ: ಹೆಬ್ರಿಯ ಸಮು ದಾಯ ಆರೋಗ್ಯ ಕೇಂದ್ರದಲ್ಲಿ ಐಸಿಟಿಸಿ ಕೌನ್ಸೆಲರ್ ಆಗಿರುವ 33ರ ಹರೆಯದ ಮಹಿಳೆ ಕೋವಿಡ್ ಬಾಧೆಗೊಳಗಾಗಿದ್ದಾರೆ. ಪಲಿಮಾರಿನ ಮನೆಯಿಂದ ದಿನಾಲೂ ಹೋಗಿ ಬರುತ್ತಿದ್ದ ಅವರನ್ನು ಇಂದು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ವಾಸವಿದ್ದ ಪಲಿಮಾರು ದರ್ಕಾಸ್ತಿನ 3 ಮನೆಗಳು ಹಾಗೂ ನಾಡ್ಪಾಲು ಗ್ರಾಮದ ಎನ್.ಎಸ್. ರಸ್ತೆಯ ಮನೆಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ. ವೈದ್ಯೆಯ ಮನೆ ಸೀಲ್‌ಡೌನ್
ಕೋಟ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಸಾಲಿಗ್ರಾಮ ಕಾರ್ಕಡದ ನಿವಾಸಿಗೆ ಸೋಂಕು ಬಾಧಿಸಿರುವ ಕಾರಣ ಅವರು ವಾಸವಿರುವ ಕಾರ್ಕಡದ ಮನೆಯನ್ನು ಕಂಟೈನ್‌ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ ಹಾಗೂ ಮನೆಯವರನ್ನು ಹೌಸ್ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.