ಹೆಬ್ರಿ: ಹೆಬ್ರಿ ತಾಲೂಕಿನ ಚಾರ ಗ್ರಾಮದ ಕಲ್ಲಿಲ್ಲು ಸೀತಾನದಿ ಡ್ಯಾಂ ಬಳಿ 11ಕೆವಿ ಲೈನ್‌ನ ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಪರಿವರ್ತಕದ ಮೇಲೆ ಬಿದ್ದ ಪರಿಣಾಮ ಸ್ಫೋಟಗೊಂಡು ಸುತ್ತಮುತ್ತಲಿನ ಸುಮಾರು 6 ಮನೆಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.
ಮಾ. 6ರ ರಾತ್ರಿ ಸುಮಾರು 11.30ಕ್ಕೆ ಟಿಸಿ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಹೈವೋಲ್ಟೆàಜ್ ಹರಿದು ಮನೆಯ ವಿದ್ಯುತ್ ಲೈನ್ ಹಾಗೂ ಬೆಲೆ ಬಾಳುವ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
ಭಾಸ್ಕರ್ ಶೆಟ್ಟಿ ಕಲ್ಲಿಲ್ಲು, ರಾಜೇಶ ದೇವಾಡಿಗ, ಗುಲಾಬಿ ಮರಕಾಲ್ತಿ ಸೇರಿದಂತೆ ಸುಮಾರು 7ಕ್ಕೂ ಹೆಚ್ಚಿನ ಮನೆಗಳಿಗೆ ಅಪಾರ ನಷ್ಟ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಕಾರ್ಯನಿರ್ವಾಹಕ ಎಂಜಿನಿಯರ್ ನರಸಿಂಹ, ಸಹಾಯಕ ಎಂಜಿನಿಯರ್ ನಾಗರಾಜ್, ವಿದ್ಯುತ್ ಪರಿವೀಕ್ಷಕ ಅಭಿನಂದನ, ಹೆಬ್ರಿ ಜೆಇ ಲಕ್ಷ್ಮೀಶ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.