ಹೆಬ್ರಿ: ಸಮುದಾಯದ ಎಲ್ಲಾ ಜನತೆ ಒಗ್ಗೂಡುವ ಮೂಲಕ ಬಲಿಷ್ಠ ಸಂಘಟನೆ ಕಟ್ಟಬಹುದು. ಇದರಿಂದ ಭವ್ಯ ಸಮುದಾಯ ಭವನ ನಿರ್ಮಾಣಕ್ಕೂ ಸಹಕಾರ ವಾಗುತ್ತದೆ. ಈ ನಿಟ್ಟಿನಲ್ಲಿ ದೇವಾಡಿಗ ಸಂಘ ಉತ್ತಮ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಮುಂಬಯಿ ದೇವಾಡಿಗರ ಸಂಘದ ಅಧ್ಯಕ್ಷ ರವಿ.ಎಸ್ ಹೇಳಿದರು.
ಅವರು ಫೆ.2 ರಂದು ಹೆಬ್ರಿ ದೇವಾಡಿಗರ ಸುಧಾರಕ ಸಂಘದ ವತಿಯಿಂದ ನಡೆದ 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೆಬ್ರಿ ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಶಂಕರ ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರ ಸಹಕಾರ ಕೋರಿದರು. ಪೊಲೀಸ್ ಶೇಖರ ಸೇರಿಗಾರ್, ಹಿರಿಯರಾದ ದೇವಪ್ಪ ದೇವಾಡಿಗ, ಪ್ರತಿಭಾವಂತ ವಿದ್ಯಾರ್ಥಿಗಳಾದ ಬೆಳಗುಂಡಿ ವಸುಧಾ ಆರ್, ವಂಶಿಕಾ ಅವರನ್ನು ಸಮ್ಮಾನಿಸಲಾಯಿತು. ಮುಂಬಯಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಚ್.ಮೋಹನದಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ವಲಯ ಮೇಲ್ವಿàಚಾರಕ ಪ್ರವೀಣ ಆಚಾರ್, ಬಾಕೂìರು ಏಕನಾಥೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಗಣೇಶ ದೇವಾಡಿಗ, ಉಡುಪಿ ದೇವಾಡಿಗರ ಸಂಘದ ಅಧ್ಯಕ್ಷ ರತ್ನಾಕರ ದೇವಾಡಿಗ, ರೀನಾ ದಯಾನಂದ ದೇವಾಡಿಗ, ಹೆಬ್ರಿ ದೇವಾಡಿಗರ ಸಂಘದ ಗೌರವಾಧ್ಯಕ್ಷ ಶೀನ ಸೇರಿಗಾರ್, ಉಪಾಧ್ಯಕ್ಷ ಸುಧಾಕರ ಸೇರಿಗಾರ್, ಕಾರ್ಯದರ್ಶಿ ಶಂಭು ಸೇರಿಗಾರ್, ಆನಂದ ಸೇರಿಗಾರ್, ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ ರಘುರಾಮ ಸೇರಿಗಾರ್, ಕಾರ್ಯದರ್ಶಿ ಸಂಧ್ಯಾ ಸದಾಶಿವ ಸೇರಿಗಾರ್, ಕಟ್ಟಡ ಸಮಿತಿಯ ಅಧ್ಯಕ್ಷ ಎಚ್.ಜನಾರ್ಧನ್, ಕೋಶಾಧಿಕಾರಿ ಉದಯ ದೇವಾಡಿಗ, ಕಾರ್ಯದರ್ಶಿ ಗೋವಿಂದ ಸೇರಿಗಾರ ಮೊದಲಾದವರು ಉಪಸ್ಥಿತರಿದ್ದರು. ಡಿ.ಜಿ.ರಾಘವೇಂದ್ರ ದೇವಾಡಿಗ ಸ್ವಾಗತಿಸಿ, ವಿಧ್ಯಾಜನಾರ್ಧನ್ ಕಾರ್ಯಕ್ರಮ ನಿರೂಪಿಸಿ, ಶಂಕರ ಸೇರಿಗಾರ್ ವಂದಿಸಿದರು.