ಹೆಬ್ರಿ: ಕಾರ್ಕಳ ಅನಂತಶಯನ ಎಪಿ ಟವರ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶೇಷ ಪರಿಕಲ್ಪನೆಯ ಹೂವಿನ ಬೆಳೆಗಾರರ ಸಹಕಾರ ಸಂಘದ ಹೆಬ್ರಿ ಶಾಖೆ ಎ.10ರಂದು ಮಧ್ಯಾಹ್ನ 3 ಗಂಟೆಗೆ ಹೆಬ್ರಿ ವಿನೂನಗರ ಪುಷ್ಪ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಳ್ಳಲಿದ್ದು ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕ ಅರುಣ್ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ.
ಹೂವಿನ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಡಿ’ಸೋಜಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಉದ್ಯಮಿ ಎಚ್. ಭಾಸ್ಕರ ಜೋಯಿಸ್, ಅಜೆಕಾರು ಚರ್ಚ್ ಪ್ರಧಾನ ಧರ್ಮಗುರು ಫಾ| ಪ್ರವೀಣ್ ಅಮೃತ್ ಮಾರ್ಟಿಸ್ ಆಶೀರ್ವಚನ ನೀಡಲಿದ್ದಾರೆ.
ಉಡುಪಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ಭದ್ರತಾ ಕೊಠಡಿ, ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಗಣಕಯಂತ್ರ, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಇ -ಸ್ಟಾಪಿಂಗ್ ಉದ್ಘಾಟಿಸುವರು. ಹೆಬ್ರಿ ಗ್ರಾ. ಪಂ.ಅಧ್ಯಕ್ಷೆ ಮಾಲತಿ, ಉದ್ಯಮಿ ಪ್ರವೀಣ್ ಬಲ್ಲಾಳ್, ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ ಬಾಯರಿ, ಉದ್ಯಮಿ ಸತೀಶ ಪೈ, ಕಟ್ಟಡದ ಮಾಲಕ ಚಂದ್ರ ನಾಯ್ಕ, ಸಮಾಜ ಸೇವಕಿ ಅನಿತಾ ಡಿ’ಸೋಜಾ ಬೆಳ್ಮಣ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ
ಮಲ್ಲಿಗೆ ಹೂ ಸಹಿತ ವಿವಿಧ ಹೂವಿನ ಬೆಳೆಗಾರರಿಗೆ ವಿವಿಧ ಸೌಲಭ್ಯ ಮತ್ತು ಸರಕಾರದ ಸವಲತ್ತು ದೊರಕಿಸುವ ಯೋಜನೆಯೊಂದಿಗೆ ಜಿಲ್ಲಾ ಮಟ್ಟದ ಮಾನ್ಯತೆ ಹೊಂದಿರುವ ಸಂಸ್ಥೆಯಲ್ಲಿ 900ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. 3 ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಸಹಕಾರಿ ಸಂಘದಲ್ಲಿ ಚಾಲ್ತಿಖಾತೆ, ಉಳಿತಾಯ ಖಾತೆ, ನಿರಖು ಠೇವಣಿ, ಆವರ್ತಿತ ಠೇವಣಿ, ನಿತ್ಯನಿಧಿ ಠೇವಣಿ, ವಾಹನಾ, ಗೃಹ ಮತ್ತು ಚಿನ್ನಾಭರಣ ಸಾಲ, ವೇತನ ಸಾಲ, ಸ್ವ-ಸಹಾಯ ಸಂಘಗಳ ಸಾಲ, ನಿತ್ಯನಿಧಿ ಠೇವಣಿ ಸಾಲ, ವ್ಯಾಪಾರ ವ್ಯವಹಾರ ಸಾಲ, ಇ- ಸ್ಟಾಂಪಿಂಗ್, ಪಾನ್ ಕಾರ್ಡ್, ನೆಫ್ಟ್ ಮತ್ತು ಆರ್‌ಟಿಜಿಎಸ್ ಸಹಿತ ಹಲವು ಸವಲತ್ತುಗಳು ಸಂಸ್ಥೆಯಲ್ಲಿ ದೊರೆಯಲಿದ್ದು ಮಲ್ಲಿಗೆ ಗಿಡಗಳು ಕೂಡ ಲಭ್ಯವಿದೆ.