Advertisement

ಹೆಬ್ರಿ: ಜಿಂಕೆಗೆ ಬೈಕ್ ಡಿಕ್ಕಿ; ಜಿಂಕೆ ಸ್ಥಳದಲ್ಲೇ ಸಾವು

12:12 PM Mar 03, 2021 | Team Udayavani |

ಹೆಬ್ರಿ: ಕನ್ಯಾನ ಸಮೀಪ  ಬೈಕ್ ವೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ  ಸ್ಥಳದಲ್ಲೇ ಮೃತಪಟ್ಟ ಘಟನೆ  ಬುಧವಾರ (ಮಾ.3) ಮುಂಜಾನೆ 5.30ರ ಹೊತ್ತಿಗೆ ನಡೆದಿದೆ.

Advertisement

ಬೈಕ್ ಸವಾರ ಹರೀಶ್ ಎಂಬವರು ಖಾಸಗಿ ಬಸ್ ನ ಚಾಲಕರಾಗಿದ್ದು, ಎಂದಿನಂತೆ ಕತ೯ವ್ಯಕ್ಕಾಗಿ ಬರುತ್ತಿರುವಾಗ ಜಿಂಕೆಯೊಂದು ಹಠಾತ್ ರಸ್ತೆಗೆ ಜಿಗಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಜಿಂಕೆಗೆ ಢಿಕ್ಕಿ ಹೊಡೆದು ಸಂಪೂಣ೯ ಜಖಂಗೊಂಡಿದೆ.

ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ: ಸಿದ್ದು ಆಗ್ರಹ

Advertisement

ಜಿಂಕೆಯು ಖಾಸಗಿ ಜಾಗದಿಂದ ಸರಕಾರಿ ಫಾರೆಸ್ಟ್ ಜಾಗಕ್ಕೆ ರಸ್ತೆ ಕ್ರಾಸ್ ಮಾಡುವಾಗ ಘಟನೆ ನಡೆದಿದೆ. ಜಿಂಕೆಯನ್ನು ಇಲಾಖೆಯ ನಿಯಮದಂತೆ ದಫನಮಾಡಲಾಗಿದೆ ಎಂದು ಹೆಬ್ರಿ ವಲಯ ಅರಣ್ಯ ಅಧಿಕಾರಿ ಮಾಕಾ೯ಂಡೇಯ ತಿಳಿಸಿದ್ದಾರೆ.

ಇದನ್ನೂ ಓದಿ:  ಸಿ.ಡಿ ಪ್ರಕರಣದ ಹಿಂದೆ ಷಡ್ಯಂತ್ರ; ರಾಜೀನಾಮೆ ಪ್ರಶ್ನೆ ಉದ್ಭವಿಸಲ್ಲ: ಅಶ್ವತ್ಥ ನಾರಾಯಣ್

Advertisement

Udayavani is now on Telegram. Click here to join our channel and stay updated with the latest news.

Next