Advertisement

ಹೆಬ್ರಿ: ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಚಾರ ಜಾಥ,ಬುಲೆಟ್‌ ರ‍್ಯಾಲಿ

03:56 PM Mar 28, 2017 | |

ಹೆಬ್ರಿ: ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮಾ. 30ರಿಂದ ಎ. 10ರ ತನಕ ನಡೆಯುವ ಅಷ್ಠಬಂಧ  ಬ್ರಹ್ಮಕಲಶೋತ್ಸವಕ್ಕೆ ಈಗಾಗಲೇ ಹೆಬ್ರಿ ಹೆಸರು ಬರಲು ಕಾರಣವಾದ ಹೆಬ್ಬೇರಿ ಕಲಾಕೃತಿಯನ್ನು ಹೆಬ್ರಿಯ ಅಂಗಡಿಮುಂಗಟ್ಟುಗಳಿಗೆ ಹಾಗೂ ಕಾರು ಇತ್ಯಾದಿ ವಾಹನಗಳಿಗೆ ಅಳವಡಿಸುವುದರಮೂಲಕ  ವಿಶೇಷ ಪ್ರಚಾರ ಕಾರ್ಯ ಆರಂಭಗೊಂಡಿದ್ದು ಮಾ. 26ರಂದು ಸುಮಾರು 40ಕ್ಕೂ ಮಿಕ್ಕಿ ಬುಲೆಟ್‌ ಮೂಲಕ ಪ್ರಚಾರ ಕಾರ್ಯಕ್ಕೆ ಉದ್ಯಮಿ ಮೋಹನ್‌ದಾಸ್‌ ಹೆಗ್ಡೆ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್‌ ದೇವಸ್ಥಾನದ ಮುಂಬಾಗದಲ್ಲಿ ಚಾಲನೆ ನೀಡಿದರು.

Advertisement

ಹೆಬ್ರಿ ಬುಲೆಟ್‌ ಕ್ಲಬ್‌ನ ನೇತೃತ್ವದಲ್ಲಿ ನಡೆದ ಬೃಹತ್‌ ಬುಲೆಟ್‌ ರ್ಯಾಲಿ ಹೆಬ್ರಿ ದೇವಸ್ಥಾನದಿಂದ ಆರಂಭಗೊಂಡು ಮುದ್ರಾಡಿ, ವರಂಗ, ಅಜೆಕಾರು ದೊಂಡೇರಂಗಡಿ ಪೆರ್ಡೂರು,  ಹಿರಿಯಡ್ಕ, ಉಡುಪಿ, ಬ್ರಹ್ಮಾವರ ಮಂದರ್ತಿ, ಕೊಕ್ಕರ್ಣೆ, ಬೆಳ್ವೆ, ಸೋಮೇಶ್ವರ ಮೂಲಕ ಸುಮಾರು 300 ಕಿ.ಮೀ. ಸಂಚರಿಸಿ ಹೆಬ್ರಿಗೆ ಆಗಮಿಸಿತು. ಸಮವಸ್ತ್ರ ದಾರಿಗಳ ಬುಲೆಟ್‌ನಲ್ಲಿ ಬೃಹತ್‌ ಗಾತ್ರದ ಧ್ವಜದೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಚಾರ ಕುರಿತು ಆಕರ್ಷಕ ಧ್ವನಿಯ ಆಡಿಯೋ ಪ್ರಚಾರ ಬುಲೆಟ್‌ ರ್ಯಾಲಿಗೆ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮದ ಚಾಲನೆಯಲ್ಲಿ ಆರ್ಥಿಕ ಸಮಿತಿಯ ಸಂಚಾಲಕ ಸತೀಶ್‌ ಪೈ, ತಾರಾನಾಥ ಬಲ್ಲಾಳ್‌, ಹೆಬ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸುಧಾಕರ ಹೆಗ್ಡೆ, ಮಾಧ್ಯಮ ಸಮಿತಿಯ ಅಧ್ಯಕ್ಷ ಯೋಗಿಶ್‌ ಭಟ್‌, ಪ್ರಚಾರ ಮತ್ತು ಸಂಪರ್ಕ ಸಮಿತಿಯ ಅಧ್ಯಕ್ಷ  ಸೀತಾನದಿ ವಿಟಲ ಶೆಟ್ಟಿ, ಟಿ.ಜಿ ಆಚಾರ್ಯ, ಅರ್ಚಕ ರಾಮಕೃಷ್ಣ ಆಚಾರ್ಯ, ಪ್ರವೀಣ್‌ ಬಲ್ಲಾಳ್‌, ಧ್ವನಿಮುದ್ರಣ ಪ್ರಚಾರದ ನೇತೃತ್ವ ವಹಿಸಿ ನವೀನ್‌ ಅಡ್ಯಂತಾಯ, ಬುಲೆಟ್‌ ರ್ಯಾಲಿಯ ನೇತೃತ್ವ ವಹಿಸಿದ ಪುಟ್ಟಣ್ಣ ಭಟ್‌, ಡಾ|  ಶೋಬಿತ್‌ ಸೀತಾನದಿ, ಪ್ರಸನ್ನ ಶೆಟ್ಟಿ, ದಿನೇಶ್‌ ಶೆಟ್ಟಿ, ಶೋಧನ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next