Advertisement

ಹೆಬ್ಬಾಳ್ಕರ್‌ –ಅಶ್ವತ್ಥನಾರಾಯಣ ಟಾಕ್‌ವಾರ್‌

07:44 PM Dec 29, 2022 | Team Udayavani |

ಸುವರ್ಣವಿಧಾನಸೌಧ: ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಸರ್ಕಾರ  ನಿರ್ಮಿಸುತ್ತಿರುವ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕ್ಯಾಂಪಸ್‌ ವಿಚಾರದಲ್ಲಿ ಸಚಿವ ಡಾ|ಸಿ.ಎನ್‌.ಅಶ್ವತ್ಥನಾರಾಯಣ ನಡೆಯ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ವಿಧಾನಸಭೆಯಲ್ಲಿ ನಡೆಯಿತು.

Advertisement

ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ-ಹಾಲಗಿಮರ್ಡಿ ಗ್ರಾಮದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಗೆ ಕೆಲಸ ನಡೆಯುತ್ತಿತ್ತು, ಅದರಿಂದ ನನಗೆ ಹೆಸರು ಬರುತ್ತದೆ ಎಂಬುದೊಂದೇ ಕಾರಣದಿಂದ ಸಚಿವರು ಜನರ ಹಾದಿ ತಪ್ಪಿಸಿದ್ದಾರೆ, ರೈತರಿಗೆ ವಿಶ್ವವಿದ್ಯಾಲಯಕ್ಕೆ ಭೂಮಿ ಬಿಟ್ಟುಕೊಟ್ಟರೆ ಎಕರೆಗೆ  40 ಲಕ್ಷ ಕೊಡುವುದಾಗಿ ಹೇಳಿದ್ದಾರೆ, ಆದರೆ ಸರ್ಕಾರಿ ಜಾಗ ಮಾತ್ರ ಬಳಕೆ ಮಾಡಿಕೊಂಡು ಈಗ ಭೂಸ್ವಾಧೀನ ಮಾಡುವುದನ್ನೇ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, 10 ವರ್ಷದ ಹಿಂದೆಯೇ ಚನ್ನಮ್ಮ ವಿವಿ ಮಂಜೂರಾಗಿದ್ದು ಇದುವರೆಗೆ ಕ್ಯಾಂಪಸ್‌ ಮಾಡಲಾಗಿಲ್ಲ, ನಾವು ಮೊದಲ ಬಾರಿಗೆ 126 ಎಕರೆ 27 ಗುಂಟೆ ಸರಕಾರಿ ಜಮೀನನ್ನು ಗುರುತಿಸಿ ಮಂಜೂರು ಮಾಡಿಕೊಂಡಿದ್ದೇವೆ. ಅಲ್ಲಿದ್ದ ರಸ್ತೆಗೆ ಸಮಸ್ಯೆ ಎಂಬ ಕಾರಣಕ್ಕೆ ರೆವಿನ್ಯೂ ನಕ್ಷೆಯಲ್ಲಿಲ್ಲದಿದ್ದರೂ ಕಾಂಪೌಂಡ್‌ ಕೆಡವಿ ರಸ್ತೆ ಮಾಡಿಕೊಟ್ಟಿದ್ದೇವೆ, ಅದಕ್ಕಾಗಿ 14 ಎಕರೆ ಜಾಗವನ್ನೂ ಬಿಟ್ಟುಕೊಟ್ಟಿದ್ದೇವೆ. ನಮಗೆ ಶಿಕ್ಷಣ ಮುಖ್ಯ ರಾಜಕೀಯ ಮಾಡುತ್ತಿರುವುದು ಶಾಸಕಿ ಎಂದು ತಿರುಗೇಟು ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next