Advertisement

ಮೈಕೊರೆವ ಚಳಿಯಲ್ಲಿ …

12:30 AM Feb 08, 2019 | Team Udayavani |

ಅಂತೂ ಮಳೆರಾಯನ ಆಡಳಿತಾವಧಿ ಕೊನೆಗೊಂಡಿದೆ. ಚಳಿರಾಯ ಪಟ್ಟವೇರಿದ್ದಾನೆ. ಕಾಡುವ ಚಳಿಗೆ ಎಲ್ಲರ ಬದುಕು – ಭಾವಗಳೆಲ್ಲ ಬದಲಾಗುವ ಕಾಲವಿದು. ಜತೆಗೆ ಬೆಚ್ಚಗಿನ ಬಟ್ಟೆ ಹೊದ್ದುಕೊಳ್ಳುವ ಕಾಲವೂ ಹೌದು. ಚಳಿಗಾಲದ ಈ ಅವಧಿಯಲ್ಲಿ ರಾತ್ರಿ ದೀರ್ಘ‌, ಹಗಲು ಕಿರಿದಾಗಿರುವುದು. ಈ ಚಳಿಗಾಲದ ಹೊತ್ತಿಗೆ ಒಂದು ಬೆಚ್ಚಗಿನ ಅಕ್ಷರ ಪಯಣ ಇಲ್ಲಿದೆ. 

Advertisement

ಈ ಚಳಿಗಾಲದ ಚಳಿಗೆ ಒಂದರ ಮೇಲೊಂದು ಹೊದಿಕೆ ಹೊದ್ದಷ್ಟು ಮುಗಿಯದು. ಹೀಗೆ ಹೊದ್ದುಕೊಂಡು ಮೈ ಬೆಚ್ಚಗೆ ಮಾಡಿಕೊಂಡು ಒಳಗೊಳಗೆ ಮುದುರಿಕೊಂಡಷ್ಟು ಮತ್ತೆ ಚಳಿ ಭಾಸವಾಗುತ್ತದೆ. ಚಳಿರಾಯನಿಂದ ರಾತ್ರಿ ಸರಿಯಾಗಿ ನಿದ್ದೆಯೂ ಬಾರದು. ಹೇಗೋ ಕಷ್ಟಪಟ್ಟು ನಿದ್ದೆ ತೊಡೆದೆದ್ದು ಬಂದರೂ ಮತ್ತೆ ಅದೇ ಚಳಿಯ ಕಾಟ. ಊಹ್‌! ಅನ್ನುತ್ತ ಬಚ್ಚಲೊಲೆಯ ಮುಂದೆ ಸೀಟು ಹಿಡಿದುಕೊಳ್ಳದೆ ಇದಕ್ಕೆ ಬೇರೆ ದಾರಿಯೇ ಇಲ್ಲ. ಬೆಂಕಿಯ ಬಿಸಿಗೆ ಕೈಚಾಚಿ ಕುಳಿತರೆ ಅಲ್ಲೇ ಅಮ್ಮನ ಗರ್ಭ ಹೊಕ್ಕಂತೆ ಅನುಭವ! ಹೆಣ್ಮಕ್ಕಳಿಗೆ ಆಷಾಢ‌ ಮಾಡಸಕ್ಕೆ ತವರು ಮನೆಗೆ ಹೋಗಲು ಆಹ್ವಾನ ಬೇಡ. ಹಾಗೆಯೇ ಈ ಚಳಿಯೂ ಆಹ್ವಾನಿಸದೆ ಸೀದಾ ಬಂದುಬಿಡುತ್ತದೆ.

ಮನೆ ಮನಗಳಲ್ಲಿ ಈ ಚಳಿಗೆ ಶುರುವಾಗೋ ಶೀತ-ಕೆಮ್ಮಿಗೆಲ್ಲ ಅಜ್ಜಿಯರದ್ದೇ ಖಾರ ಖಾರ ಕಷಾಯ. ಮಕ್ಕಳೆಲ್ಲ ಖಾರ ಎಂದು ಓಡಿದರಂತೂ ಹಿಡಿದು ಕುಡಿಸೋ ಅಮ್ಮ. ಒಟ್ಟಾರೆ ಅಮ್ಮ ಹಾಗೂ ಅಜ್ಜಿಯ ಆರೈಕೆಯಲ್ಲಿ ಮಕ್ಕಳೆಲ್ಲ ಸುಸ್ತೋ ಸುಸ್ತು.
ಮನೆಯ ಊಟದ ಮೆನುವಿನಲ್ಲೂ ಬದಲಾವಣೆ ಕಾಣುವುದು ಈ ಸಮಯದಲ್ಲೇ. ಊಟ-ತಿಂಡಿ ಎಲ್ಲವೂ ಸ್ಪೈಸಿ, ಸ್ಪೈಸಿ. ಬಜ್ಜಿ, ಬೊಂಡಾಗಳಿಗೆಲ್ಲ ಡಿಮ್ಯಾಂಡೋ ಡಿಮ್ಯಾಂಡ್‌. ಅದರಲ್ಲೂ ಕುರುಂ ಕುರುಂ ಚಕ್ಕುಲಿ ಸಿಕ್ಕಿದರಂತೂ ಹೇಳುವುದೇ ಬೇಡ. ಮಾತ್ರವಲ್ಲದೆ, ನಾಲಿಗೆಗೆ ರುಚಿಯನಿಸುವ ಕುರುಕಲು ತಿಂಡಿಗಳು ಮನೆಯ ಡಬ್ಬಗಳನ್ನು ಅಲಂಕರಿಸಿಬಿಡುತ್ತವೆ. ತಿಂಡಿ ಮೇಳಗಳು, ಫ‌ುಡ್‌ ಫೆಸ್ಟಿವಲ್‌ಗ‌ಳು ಗರಿಗೆದರುವುದು ಈಗಲೆ.

ಸುಶ್ಮಿತಾ ಎಮ್‌. ಸಾಮಾನಿ
ಪತ್ರಿಕೋದ್ಯಮ ವಿಭಾಗ, ಮಂಗಳೂರು ವಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next