Advertisement

ಯಗಚಿ ಸೇತುವೆ ಮೇಲೆ ಭಾರೀ ವಾಹನ ನಿಷೇಧ

08:44 PM Nov 12, 2020 | Suhan S |

ಬೇಲೂರು: ಪಟ್ಟಣ ಸಮೀಪದ ಯಗಚಿ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಸೇತುವೆ ಶಿಥಿಲಾವಸ್ಥೆಯಲಿದ್ದು, ಅದನ್ನು ಉಳಿಸುವ ಸಲುವಾಗಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ, ರಾಷ್ಟ್ರೀಯಹೆದ್ದಾರಿ ಪ್ರಾಧಿಕಾರ ಅಡ್ಡಲಾಗಿ ಸಿಮೆಂಟ್‌ ಕಂಬಗಳನ್ನು ನೆಟ್ಟಿದೆ.

Advertisement

ಪಟ್ಟಣದ ಯಗಚಿ ಸೇತುವೆ ಶತಮಾನ ಪೂರೈಸಿದ್ದು, ಮಲೆನಾಡು ಭಾಗದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಸಂರ್ಪಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿದೆ ನಿರ್ಮಿಸಲಾಗಿದೆ. ಯಗಚಿ ನಾಲೆಗೆ ಯಾವುದೇ ಸೇತುವೆ ಇಲ್ಲದ ಕಾರಣ, ಬೇಲೂರಿನಿಂದ ಬೇರೆ ಸ್ಥಳಗಳಿಗೆ ಹೋಗಲು ದೋಣಿ ಬಳಸಬೇಕಿತ್ತು. ಇದನ್ನು ಮನಗಂಡ ಹಿಂದಿನ ಬ್ರಿಟಿಷ್‌ ಸರ್ಕಾರ, ಜನರ ಅನುಕೂಲಕ್ಕಾಗಿ ಒಂದು ಸೇತುವೆ ನಿರ್ಮಾಣಮಾಡಿತ್ತು. ಆದರೆ, ಸಮರ್ಪಕ ನಿರ್ವಹಣೆ ಮಾಡದ ಕಾರಣ, ಭಾರೀ ವಾಹನಗಳ ಅತಿಯಾದ ಸಂಚಾರ ದಿಂದ ಇತ್ತೀಚಿಗೆ ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು.ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಐತಿಹಾಸಿಕ ಯಗಚಿ ಸೇತುವೆ ಉಳಿಸಲು ಕರವೇ ಸೇರಿ ತಾಲೂಕಿನ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕೆ R, ತಾಲೂಕುಆಡಳಿತಕ್ಕೆ ಮನವಿ ಸಲ್ಲಿಸಿದ್ದವು. ಇದರಿಂದ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸೇತುವೆ ಶಿಥಿಲಕ್ಕೆಕಾರಣವಾದ ಭಾರೀ ತೂಕದ ವಾಹನಗಳನ್ನು ನಿಷೇಧಿಸಿ, ಸೇತುವೆ ಎರಡೂ ಬದಿಯಲ್ಲಿ ಸಿಮೆಂಟ್‌ ಕಂಬಗಳನ್ನು ಅಳವಡಿಸಿ, ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮುನಿರಾಜು ಉದಯವಾಣಿಯೊಂದಿಗೆ ಮಾತನಾಡಿ, ಯಗಚಿ ನದಿ ಸೇತುವೆ ಶಿಥಿಲಗೊಂಡಿರುವುದರಿಂದ ಭಾರೀ ತೂಕದ ವಾಹನ ನಿರ್ಬಂಧಿಸಲಾಗಿದೆ. ಸೇತುವೆ ಮುಂಭಾಗದಲ್ಲಿ ಗುಂಡಿಬಿದ್ದಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಸೇತುವೆ ಪರಿಶೀಲಿಸಿದ್ದು, ಭಾರೀ ತೂಕದವಾಹನಗಳನ್ನು ನಿಷೇಧಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಈಗಾಗಲೇ ಸೇತುವೆ ಮುಂಭಾಗದಲ್ಲಿ ಸಿಮೆಂಟ್‌ ಕಂಬ ಅಳವಡಿಸಿದ್ದು, ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಸಂಚಾರಕ್ಕೆಅನುವುಮಾಡಿಕೊಡಲಾಗಿದೆ. ಚಾಲಕರು ಇದನ್ನು ಗಮನಹರಿಸಿ ಸೇತುವೆ ಮೇಲೆ ನಿಧನವಾಗಿ ಸಂಚರಿಸಬೇಕು ಹಾಗೂ ಪಕ್ಕದಲ್ಲೇ ನಿರ್ಮಿಸಿರುವ ಹೊಸ ಸೇತುವೆ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಕರವೇ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, 130 ವರ್ಷ ಪೂರೈಸಿರುವ ಯಗಚಿಸೇತುವೆಉಳಿಸಬೇಕುಎಂದು ಹಲವು ಸಂಘಟನೆಗಳ ಜೊತೆ ಪ್ರತಿಭಟಿಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಗಮನಹರಿಸಿ ಕ್ರಮಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

Advertisement

ಸೇತುವೆಯನ್ನು ಪೂರ್ತಿ ಕಲ್ಲಿನಿಂದ, ವಿಶೇಷ ವಿನ್ಯಾಸದೊಂದಿಗೆ ನಿರ್ಮಾಣ ಮಾಡಲಾಗಿದೆ. ಇಲಾಖೆ ಅಧಿಕಾರಿಗಳು ನಾಲ್ಕು ಚಕ್ರದ ವಾಹನ ಗಳನ್ನೂ ನಿರ್ಬಂಧಿಸಿ, ಕೇವಲ ಬೈಕ್‌, ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಅಲ್ಲದೆ, ತಡೆಯಾಗಿ ಸಿಮೆಂಟ್‌ ಕಂಬ ಬದಲಿದೆ, ಕಬ್ಬಿಣದ ಕಂಬ ಹಾಕಿದ್ದರೆ ಉತ್ತಮವಾಗಿರುತ್ತಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next