Advertisement

ರೋಣದಲ್ಲಿ ಭಾರೀ ಬಿರುಗಾಳಿ: ಹಾರಿ ಹೋದ ಮೇಲ್ಛಾವಣಿ, ಕುಸಿದ ವಿದ್ಯುತ್ ಕಂಬಗಳು

06:52 PM Apr 10, 2022 | Team Udayavani |

ರೋಣ(ಗದಗ): ತಾಲೂಕಿನ ವಿವಿಧ ಗ್ರಾಮಗಳಲ್ಲಿ ರವಿವಾರ ಸಂಜೆ ಗುಡುಗು, ಮಿಂಚು ಸಹಿತ ಬಿರುಗಾಳಿ ಬೀಸುತ್ತಿದ್ದು, 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ, ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.

Advertisement

ತಾಲೂಕಿನ ನೈನಾಪೂರ, ಮಾಡಲಗೇರಿ, ಹಿರೇಹಾಳ, ಕೋತಬಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರವಿವಾರ ಸಂಜೆಯಿಂದ ಆರಂಭಗೊಂಡಿರುವ ಬಿರುಗಾಳಿಗೆ ಮನೆಗಳ ಮೇಲ್ಛಾವಣಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್‌ಗಳು ಹಾರಿಹೋಗಿವೆ. ಮನೆಯಲ್ಲಿರುವ ಅಗತ್ಯ ವಸ್ತುಗಳ ರಕ್ಷಣೆಗೆ ಜನರು ಪರದಾಡುವಂತಾಗಿದೆ.

ಸುಮಾರು 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next