Advertisement
ಹೌದು, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರು ನಗರದೆಲ್ಲೆಡೆ ಐಷಾರಾಮಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ನಡುವೆಯೂ ಮೈಸೂರಿನ ನಾರಾಯಣಶಾಸಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಟಿಫಾನೀಸ್, ರುಚಿ ಮತ್ತು ಶುಚಿಯಾದ ತಿಂಡಿ-ತಿನಿಸುಗಳನ್ನು ನೀಡುವ ಮೂಲಕ ಇಂದಿಗೂ ತನ್ನ ಗ್ರಾಹಕರ ಆಕರ್ಷಣೆಯನ್ನು ಉಳಿಸಿಕೊಂಡಿದೆ.
Related Articles
Advertisement
ಉಪ್ಪಿಟ್ಟಿಗೆ ಸಕತ್ ಡಿಮ್ಯಾಂಡ್: 40 ವರ್ಷಗಳಿಂದಲೂ ತನ್ನತನವನ್ನು ಉಳಿಸಿಕೊಂಡಿರುವ ರಾಘವೇಂದ್ರ ಟಿಫಾನೀಸ್‌ನ ಉಪ್ಪಿಟ್ಟಿನ ರುಚಿಗೆ ಮನಸೋಲದವರೇ ಇಲ್ಲ. ನಿತ್ಯದ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಪ್ರತಿದಿನ ಸಂಜೆ ಇಲ್ಲಿಗೆ ಆಗಮಿಸಿ ಉಪ್ಪಿಟ್ಟು, ಕಾಫಿ ಸೇವಿಸಿ ಹೋಗುವ ಹವ್ಯಾಸವನ್ನು ಅನೇಕರು ರೂಢಿಸಿಕೊಂಡಿದ್ದಾರೆ.
ಈ ಹೋಟೆಲ್ ವಾರದ ಏಳು ದಿನಗಳೂ ತೆರೆದಿರುತ್ತದೆ. ಇನ್ನೂ ಹೋಟೆಲ್‌ನ ಎದುರಿನಲ್ಲೇ ಇರುವ ಶಾಂತಲಾ ಚಿತ್ರಮಂದಿರವಿದೆ. ಅಲ್ಲಿಗೆ ಬರುವ ಅನೇಕ ಸಿನಿಪ್ರಿಯರು ಸಿನಿಮಾ ಆರಂಭಕ್ಕೂ ಮುನ್ನ ಈ ಟಿಫಾನೀಸ್‌ಗೆ ಹೋಗಿ, ತಿಂದು ನಂತರ ಥಿಯೇಟರ್‌ನ ಕಡೆಗೆ ಹೆಜ್ಜೆಹಾಕುತ್ತಾರೆ.
“ನಮ್ಮ ಹೋಟೆಲ್‌ನಲ್ಲಿ ರುಚಿ ಹಾಗೂ ಶುಚಿತ್ವದಲ್ಲಿ ಯಾವುದೇ ರಾಜಿಯಾಗಿಲ್ಲ. ನಾಲ್ಕು ದಶಕದಿಂದಲೂ ತಿನಿಸುಗಳು ತಯಾರಿಲ್ಲಿ, ಆರಂಭದಿಂದ ಇಲ್ಲಿಯವರೆಗೂ ಒಂದೇ ಗುಣಮಟ್ಟ ಕಾಪಾಡಿಕೊಂಡು ಬರಲಾಗಿದೆ. ಇದೇ ಕಾರಣಕ್ಕಾಗಿ ಹಲವು ಗ್ರಾಹಕರು ಇಂದಿಗೂ ನಮ್ಮ ಹೋಟೆಲ್‌ಗೆ ಇಷ್ಟಪಟ್ಟು ಬರುತ್ತಾರೆ ಎನ್ನುತ್ತಾರೆ ಹೋಟೆಲ್ ಮಾಲೀಕ ಎನ್.ಬಲರಾಮ್ ಹರ್ಷ.
* ಸಿ. ದಿನೇಶ್