Advertisement

ದಿಡುಪೆ ಹೆಬ್ಬಾರ್ತಿಕಲ್ ಗುಡ್ಡದಲ್ಲಿ ಭಾರಿ ಗಾತ್ರದ ಬಂಡೆ ಕುಸಿತ: ಸ್ಥಳೀಯರಲ್ಲಿ ಆತಂಕ !

12:39 PM Jul 19, 2020 | Mithun PG |

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮಲವಂತಿಗೆ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಬಂಡೆಯೊಂದು ಉರುಳಿಬಿದ್ದಿದೆ.

Advertisement

ದಿಡುಪೆ ಹೆಬ್ಬಾರ್ತಿಕಲ್  ಗುಡ್ಡದಲ್ಲಿ ರವಿವಾರ ಮುಂಜಾನೆ 9.30 ಸಮಯದಲ್ಲಿ ಈ ಬಂಡೆ ಕುಸಿದಿದ್ದು, ಉರುಳಿಬಿದ್ದ ಸದ್ದಿಗೆ ಆತಂಕದಿಂದ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೋಡಿ ಬಂದಿದ್ದಾರೆ.

ಬಂಡೆ ಬಿದ್ದ ಸ್ಥಳದಲ್ಲಿ ದಟ್ಟ ಹೊಗೆ ಆಡಿದ ವಾತಾವರಣ ಕಂಡಿದ್ದು, ಕಳೆದ ಕೆಲದಿನಗಳಿಂದ ಮಳೆ ಸುರಿದಿದ್ದರಿಂದ ಮಣ್ಣು ಸಡಿಲಗೊಂಡು ಬಂಡೆ ಉರುಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೈದಾಡಿ ಘಾಟಿ ಕೆಳಗಿರುವ ಹೆಬ್ಬಾರ್ತಿಕಲ್  ಗುಡ್ಡದಲ್ಲಿ ಈ ಘಟನೆ ಸಂಭವಿಸಿದ್ದು, ಗುಡ್ಡದ 3 ಕಿ.ಮೀ. ದೂರದಲ್ಲಿ 10 ಕ್ಕೂ ಅಧಿಕ ಮನೆಗಳಿವೆ. ಹೀಗಾಗಿ ಸ್ಥಳೀಯ ನಿವಾಸಿಗಳಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ.

Advertisement

ಕಳೆದ ಬಾರಿ ಕೂಡ ಇದೇ ವ್ಯಾಪ್ತಿಯ ತುಲುಪುಲೆ ಬದಿ ಗುಡ್ಡ ಜರಿದು ತೋಟಗಳಿಗೆ ಹಾನಿಯಾಗಿತ್ತು.

 ಕಳೆದ ಬಾರಿ ಕುಸಿತಗೊಂಡಿದ್ದ ಪಕ್ಕದ ಬೆಟ್ಟ ಬಣ್ಣಕಲ್ ಗುಡ್ಡ ಚಿತ್ರಣ

Advertisement

Udayavani is now on Telegram. Click here to join our channel and stay updated with the latest news.

Next