Advertisement

Sikkim ಭಾರೀ ಮಳೆ: ಹಲವೆಡೆ ಭೂಕುಸಿತ, ಸೇತುವೆಗಳಿಗೆ ಹಾನಿ

11:47 PM Sep 27, 2024 | Team Udayavani |

ಗ್ಯಾಂಗ್ಟೋಕ್‌: ಸಿಕ್ಕಿಂನಲ್ಲಿ 3 ದಿನಗಳಿಂದ ಭಾರೀ ಮಳೆ ಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಪ್ರವಾಹದಿಂದಾಗಿ ಹಲವಾರು ಸೇತುವೆಗಳಿಗೆ ಹಾನಿ ಉಂಟಾಗಿದೆ.

Advertisement

ಸಿಕ್ಕಿಂನ ಉತ್ತರ ಭಾಗಕ್ಕೆ ಸಂಪ ರ್ಕಿಸುವ ಹಳೆಯ ಸೇತುವೆಗೆ ಪ್ರವಾಹದಿಂದ ಹಾನಿ ಯಾಗಿದೆ. ಹೀಗಾಗಿ, ಮಂಗನ್‌ ಜಿಲ್ಲೆಗೆ ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದೆ. ಮುಂದಿನ 2 ದಿನಗಳ ವರೆಗೆ ರಾಜ್ಯದಲ್ಲಿ ಭಾರೀ ಮಳೆ ಯಾಗಲಿದೆ ಎಂದು ಐಎಂಡಿ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.

ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ದ್ದರಿಂದ ದೇಶದ ವಿವಿಧ ಸ್ಥಳಗಳಿಂದ ರಾಜ್ಯಕ್ಕೆ ಆಗ ಮಿಸಿದ್ದ ಪ್ರವಾಸಿಗರಿಗೆ ತೊಂದರೆ ಉಂಟಾಗಿದೆ. ಪ್ರವಾಸಿಗರು ನಿಗದಿತ ಸ್ಥಳ ತಲುಪಲು 3-4 ಗಂಟೆಗಳನ್ನು ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next