Advertisement
ಕೇರಳ ಮಾತ್ರವಲ್ಲದೆ, ತಮಿಳುನಾಡು, ಪುದುಚೇರಿಯಲ್ಲೂ ಧಾರಾಕಾರ ಮಳೆಯಾಗಲಿದೆ ಎಂದಿರುವ ಇಲಾಖೆ, ಲಡಾಖ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಅತೀವ ಹಿಮಪಾತವಾಗ ಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
Related Articles
Advertisement
ಅಣೆಕಟ್ಟುಗಳ ಗೇಟ್ ಓಪನ್ಮಳೆಯಿಂದಾಗಿ ಕೇರಳದ ನಾನಾ ಭಾಗಗಳಲ್ಲಿರುವ ಅಣೆಕಟ್ಟುಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಅಣೆಕಟ್ಟು ಗಳಾದ ಇಡುಕ್ಕಿ, ಇದಮಲಯಾರ್, ಪಂಬಾ ಹಾಗೂ ಕಕ್ಕಿಯಿಂದ ಯಥೇತ್ಛ ನೀರನ್ನು ಹರಿಯಬಿಡ ಲಾಗಿದೆ. ಇದರಿಂದಾಗಿ ಈ ನದಿ ಪಾತ್ರದಲ್ಲಿ ಬರುವ ನಗರಗಳು, ಗ್ರಾಮಗಳಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಸಂಬಂಧಪಟ್ಟ ಜಿಲ್ಲಾಡಳಿತಗಳು ಸೂಚನೆ ನೀಡಿವೆ. ಬಂಗಾಲದಲ್ಲೂ ವರುಣನ ಆರ್ಭಟ: ಪಶ್ಚಿಮ ಬಂಗಾಲದ ಎಲ್ಲ ಜಿಲ್ಲೆಗಳಲ್ಲಿ ಗುರುವಾರ ಮಳೆ ವ್ಯಾಪಕವಾಗಿ ಸುರಿಯಲಿದೆ ಎಂದು ಐಎಂಡಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಈ ನಡುವೆ, ಕಲೀಮ್‌ಪಾಂಗ್ ಜಿಲ್ಲೆಯ ಝಾಲೊಂಗ್ ಪ್ರಾಂತ್ಯದಲ್ಲಿ ಸೋಮವಾರ -ಮಂಗಳವಾರ ನಡುವಿನ 24 ಗಂಟೆಗಳ ಅವಧಿಯಲ್ಲಿ 200 ಮಿ.ಮೀ. ಗಳಷ್ಟು ಮಳೆಯಾಗಿದೆ. ಇದನ್ನೂ ಓದಿ:ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್ ಮೋದಿಗೆ ಮತ್ತೆ ನಿರಾಶೆ ಇದೇ ಅವಧಿಯಲ್ಲಿ ಡಾರ್ಜಿಲಿಂಗ್‌ನಲ್ಲಿ 170 ಮಿ.ಮೀ., ಪೆಡಾಂಗ್ ಹಾಗೂ ಕ್ಯಾನಿಂಗ್‌ನಲ್ಲಿ 100 ಮೀ., ಡೈಮಂಡ್ ಹಾರ್ಬರ್‌ನಲ್ಲಿ 90 ಮಿ.ಮೀ. ಹಾಗೂ ಪುರುಲಿಯಾದಲ್ಲಿ 80 ಮಿ.ಮೀ. ಮಳೆಯಾಗಿದೆ. ಡಾರ್ಜಿಲಿಂಗ್, ಸಿಕ್ಕಿಂ, ಕಲೀಂಪೋಗ್‌ನ ಕೆಲವು ಪ್ರಾಂತ್ಯಗಳಲ್ಲಿ ಅತೀ ಮಳೆಯಿಂದಾಗಿ ಭೂಕುಸಿತವೂ ಉಂಟಾಗಿದೆ ಎಂದು ಐಎಂಡಿ ತಿಳಿಸಿದೆ. ಮಕ್ಕಳ ಮದುವೆ ಮುಂದೂಡಿದ ಮಹಾರಾಷ್ಟ್ರ ರೈತರು
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮುಂಗಾರು ಫಸಲು ನಷ್ಟವಾಗಿರುವುದು ಅಲ್ಲಿನ ರೈತರ ಮಕ್ಕಳ ಜೀವನದ ಮೇಲೂ ಪರಿಣಾಮ ಬೀರಿದೆ. ಮುಂಗಾರು ಫಸಲನ್ನು ಮಾರಾಟ ಮಾಡಿ ಬಂದ ಹಣದಿಂದ ತಮ್ಮ ಮಕ್ಕಳ ಮದುವೆ ಮಾಡಬೇಕೆಂದು ಕನಸು ಕಂಡಿದ್ದ ವಿಹಾಮಂದ್ವ, ಔರಂಗಾಬಾದ್, ಪೈತಾನ್ ಪ್ರಾಂತ್ಯಗಳ ಅನೇಕ ರೈತ ಕುಟುಂಬಗಳು, ಈಗಾಗಲೇ ತಮ್ಮ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದ್ದರು. ಅಸಲಿಗೆ ಈ ಪ್ರಾಂತ್ಯಗಳು ಈವರೆಗೆ ಕಡಿಮೆ ಮಳೆ ಬೀಳುವ ಪ್ರಾಂತ್ಯಗಳೆಂದೇ ಗುರುತಿಸಲ್ಪಟ್ಟಿರುವಂಥವು. ಈ ಭಾಗದಲ್ಲಿ ವಾರ್ಷಿಕವಾಗಿ, ಒಟ್ಟಾರೆ 564.6 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, ಈ ವರ್ಷ ಇನ್ನೇನು ಮುಂಗಾರು ಫಸಲು ಕೈ ಸೇರುವ ಹೊತ್ತಿಗೆ 1,365.9 ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದ ಬೆಳೆಗಳು ನಾಶವಾಗಿ, ರೈತರು ನಷ್ಟ ಅನುಭವಿಸಿದ್ದಾರೆ. ಅದರಿಂದ ಅವರ ಮಕ್ಕಳ ಮದುವೆಗಳೂ ಮುಂದಕ್ಕೆ ಹೋಗಿವೆ ಎನ್ನಲಾಗಿದೆ.