Advertisement

ಯಾಸ್ ಚಂಡಮಾರುತ : ಗೋವಾದಲ್ಲಿ ಮೇ 28 ರಿಂದ ಮೂರು ದಿನಗಳ ಕಾಲ ಭಾರಿ ಮಳೆ

03:20 PM May 27, 2021 | Team Udayavani |

ಪಣಜಿ: ಗೋವಾ ರಾಜ್ಯಾದ್ಯಂತ ಮೇ 28 ರಿಂದ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಗೋವಾ ಹವಾಮಾನ ಇಲಾಖೆಯ ಶಾಸ್ತ್ರಜ್ಞ ಎಂ.ರಾಹುಲ್ ಮಾಹಿತಿ ನೀಡಿದ್ದಾರೆ.

Advertisement

ಮೇ 31 ರಂದು ಮಾನ್ಸೂನ್ ಕೇರಳಕ್ಕೆ ಆಗಮಿಸಲಿದೆ. ಇಷ್ಟೇ ಅಲ್ಲದೆಯೇ ಓರಿಸ್ಸಾದಲ್ಲಿ ಯಾಸ್ ಚಂಡಮಾರುತ ಹೆಚ್ಚಿನ ಅನಾಹುತ ಸೃಷ್ಠಿಸಿದೆ. ಇದರ ಪರಿಣಾಮವಾಗಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಾಗಲಿದೆ.

ಮುಂದಿನ ಕೆಲ ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ಯಾವುದೇ ಚಂಡಮಾರುತದ ಸಾಧ್ಯತೆಯಿಲ್ಲ. ಗೋವಾ ರಾಜ್ಯದಲ್ಲಿ ನಿಗದಿತ ಸಮಯದಂತೆಯೇ ಮಾನ್ಸೂನ್ ಆಗಮನವಾಗಲಿದೆ ಎಂದು ಎಂ.ರಾಹುಲ್ ಮಾಹಿತಿ ನೀಡಿದರು.

ಯಾಸ್ ಚಂಡ ಮಾರುತದ ಪರಿಣಾಮ ಗೋವಾದ ಕಿನಾರಿ ಭಾಗದಲ್ಲಿ ಕಂಡುಬಂದಿದೆ. ಬುಧವಾರ ಯಾಸ್ ಚಂಡಮಾರುತದ ಪರೀಣಾಮ ಗೋವಾದ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next