ಭಟ್ಕಳ: ಭಟ್ಕಳದಲ್ಲಿ ಸುರಿದ ಭಾರೀ ಮಳೆಗೆ ಮೀನುಗಾರಿಕಾ ಬೋಟುಗಳಿಗೆ ಹಾಗೂ ದೋಣಿಗಳಿಗೆ ಹಾನಿಯಾಗಿದ್ದು ಸುಮಾರು 1 ಕೋಟಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಅಳ್ವೇಕೋಡಿಯಲ್ಲಿ ಯಕ್ಷೇಶ್ವರಿ ಮಾಟಬಲೆಗೆ ಸಂಬಂಧಪಟ್ಟ ಮೂರು ದೋಣಿಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಒಂದು ದೋಣಿಗೆ ಸಂಪೂರ್ಣ ಹಾನಿಯಾಗಿದೆ ಎಂದು ವರದಿಯಾಗಿದೆ.
ಇನ್ನೂ ಸುಮಾರು 10-15 ದೋಣಿಗಳಿಗೆ ಹಾನಿಯಾಗಿದ್ದು, ಹಾನಿಯನ್ನು ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ. ತೆಂಗಿನಗುಂಡಿ ಮೀನುಗಾರಿಕಾ ಬಂದರಿನಲ್ಲಿ ಸಹ ಅನೇಕ ದೋಣಿಗಳಿಗೆ, ಬೋಟುಗಳಿಗೆ ಹಾನಿಯಾಗಿದ್ದು ಎರಡು ದೋಣಿಗಳು ನೀರಿನಲ್ಲಿ ಕೊಚ್ಚಿ ಸಮುದ್ರ ಸೇರಿದ್ದು ಸಂಪೂರ್ಣ ಹಾನಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಮಳೆಗೆ ಒಂದೇ ದಿನ 6 ಸಾವು: ನಾಳೆ 10 ಜಿಲ್ಲೆಗಳಿಗೆ ರೆಡ್ ಅಲರ್ಟ್
ಸುಮಾರು 7 ಯಮಹಾ ಇಂಜಿನ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಕುರಿತು ವರದಿಯಾಗಿದ್ದು, ಬೈಂದೂರಿನ ಮಾಟಬಲೆ ದೋಣಿಯೊಂದರ ಸುಮಾರು 15 ಲಕ್ಷದ ಮೀನುಗಾರಿಕಾ ಬಲೆಯು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಏಕದಂತ ಎನ್ನುವ ಬೋಟ್ ಅನ್ನು ಮೀನುಗಾರರು ರಕ್ಷಣೆ ಮಾಡಿದ್ದರಿಂದ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.