Advertisement
ಕಾಸರಗೋಡು: ಪ್ರಸ್ತುತ ವರ್ಷ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆ ಯಾದುದರಿಂದ 2,195 ಗ್ರಾಮಗಳು ಮುಳುಗಡೆಯಾಗಿವೆ. ಸುಮಾರು 115 ಕೋಟಿ ರೂ. ನಷ್ಟ ಸಂಭವಿಸಿದ್ದು, ಕಳೆದ 42 ದಿನಗಳಲ್ಲಿ ಕೇರಳದಲ್ಲಿ 74 ಮಂದಿ ಸಾವಿಗೀಡಾಗಿ, 25 ಮಂದಿ ಗಾಯಗೊಂಡಿದ್ದಾರೆ. ಸುಮಾರು 4.288 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಯಿತು ಎಂದು ದುರಂತ ನಿವಾರಣೆ ಅಥೋರಿಟಿ ಬಹಿರಂಗ ಪಡಿಸಿದ ಅಂಕಿಅಂಶದಲ್ಲಿ ದಾಖಲಿಸಿದೆ.
ಭಾರೀ ಮಳೆಯ ಪರಿಣಾಮವಾಗಿ ರಾಜ್ಯದಲ್ಲಿ 7,689.74 ಹೆಕ್ಟರ್ ಕೃಷಿ ನಾಶನಷ್ಟ ಸಂಭವಿಸಿತು. 292.78 ಕಿಲೋ ಮೀಟರ್ ವಿದ್ಯುತ್ ಲೈನ್, 2,016 ವಿದ್ಯುತ್ ಕಂಬಗಳು, 1,207 ಟ್ರಾನ್ಸ್ ಫಾರ್ಮರ್‌ಗಳು ಹಾನಿಗೀಡಾದವು.
ತೀವ್ರ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಗುಡ್ಡ ಕುಸಿತ, ಮಣ್ಣು ಕುಸಿತ, ನೆರೆ ಭೀತಿ ಕಂಡು ಬಂತು. ಬಿರುಗಾಳಿ: ಮೀನುಗಾರಿಕೆಗೆ ತೆರಳದಂತೆ ಇಲಾಖೆಎಚ್ಚರಿಕೆ ಮುಂದಿನ ದಿನಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಜು. 17ರ ವರೆಗೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Related Articles
Advertisement
ಕಾಸರಗೋಡು ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ದಿನಗಳ ಹಿಂದೆ ನದಿ ಪರಿಸರದಲ್ಲಿ ನೆರೆ ಸೃಷ್ಟಿಯಾಗಿತ್ತು. ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.