Advertisement
ಹೆದ್ದಾರಿ ಅಗಲ ಕಾಮಗಾರಿ ಸಂದರ್ಭ ಇದ್ದ ಚರಂಡಿಗಳನ್ನೆಲ್ಲ ಮುಚ್ಚಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೇ ಹಲವು ಸಮಸ್ಯೆಗಳಿಗೆ ಕಾರಣವಾಯಿತು. 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು, ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಸಮೀಪದ ಬಾರಿಕೆ, ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಂಗಳೂರು- ಬೆಂಗಳೂರು ರಾ. ಹೆದ್ದಾರಿ ಜಲಾವೃತಗೊಂಡರೆ, ಹೆದ್ದಾರಿಯಿಂದ ನಟ್ಟಿಬೈಲು ಸಂಪರ್ಕಿಸುವ ಅಡ್ಡ ರಸ್ತೆ, ಕೃಷಿ ಭೂಮಿಗಳು ಜಲಾವೃತಗೊಂಡವು.
Related Articles
ಹೆದ್ದಾರಿ ಸಂಚಾರಕ್ಕೆ ತಡೆ
ಉಪ್ಪಿನಂಗಡಿ: ರವಿವಾರ ಸುರಿದ ಭಾರೀ ಗಾಳಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕೆಲ ತಾಸು ಹೆದ್ದಾರಿ ಸಂಚಾರ ತಡೆ ಹಿಡಿಯಲ್ಪಟ್ಟ ಘಟನೆ ಸಂಭವಿಸಿದೆ.
ಇಚ್ಲಂಪಾಡಿ ಬಳಿ ಸಂಚರಿಸುತ್ತಿದ್ದ ಟೆಂಪೊ ಟ್ರಾವೆಲರ್ ವಾಹನದ ಮೇಲೆ ಮರ ಬಿದ್ದು ವಾಹನ ಸಂಚಾರ ತಡೆ ಹಿಡಿಯಲ್ಪಟ್ಟಿತ್ತು. ಅದೃಷ್ಟವಶಾತ್ ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ. ಮರ ಬಿದ್ದ ಕಾರಣ ಹೆದ್ದಾರಿಯಲ್ಲಿ ಕಿ.ಮೀ. ಉದ್ದಕ್ಕೂ ವಾಹನಗಳು ಸಾಲು ನಿಲ್ಲುವಂತಾಯಿತು.
Advertisement
ಸುಮಾರು ಒಂದು ಗಂಟೆ ಕಾಲ ಪೊಲೀಸರು ಹಾಗೂ ಸ್ಥಳೀಯರ ಪ್ರಯತ್ನದ ಫಲವಾಗಿ ಟಿಟಿ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಪುನರಾರಂಭಗೊಂಡಿತ್ತು.