Advertisement

ರಾಜ್ಯದಲ್ಲಿ ಮತ್ತಷ್ಟು ಮಳೆ ನಿರೀಕ್ಷೆ

06:05 AM Aug 18, 2018 | |

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಬಂಗಾಳ ಕೊಲ್ಲಿಯ ವಾಯವ್ಯದಲ್ಲಿ ವಾಯುಭಾರ
ಕುಸಿತದ ಲಕ್ಷಣಗಳು ಕಂಡುಬಂದಿದ್ದು, ಮತ್ತೆ ಆತಂಕ ಸೃಷ್ಟಿಸಿದೆ.

Advertisement

ಬಂಗಾಳಕೊಲ್ಲಿಯ ವಾಯವ್ಯದಲ್ಲಿ 19 ರಂದು ವಾಯುಭಾರ ಕುಸಿತದ ಮುನ್ಸೂಚನೆ ಕಂಡು ಬಂದಿದೆ. ಇದರ ಪ್ರಭಾವ ಕರಾವಳಿ ಮತ್ತು ಘಟ್ಟಪ್ರದೇಶಗಳಲ್ಲಿ ಆಗಲಿದೆ.

ಹೀಗಾಗಿ, ಅಲ್ಲಿ ಮತ್ತೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ
ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ಒತ್ತಡದ ತಗ್ಗು (ಟ್ರಫ್) ಮತ್ತು ಪಶ್ಚಿಮ ದಿಕ್ಕಿನಿಂದ ತೀವ್ರ ಗಾಳಿ ಬೀಸುತ್ತಿದ್ದು ದರಿಂದ ಕರಾವಳಿ, ಮಲೆನಾಡು ಅದರಲ್ಲೂ ಕೊಡಗಿನಲ್ಲಿ ಮಳೆ ಆರ್ಭಟ ತೀವ್ರವಾಗಿತ್ತು. ಆದರೆ, ಶುಕ್ರವಾರ ತುಸು ತಗ್ಗಿತ್ತು. ಶನಿವಾರ ಕೂಡ ಮಳೆ ಬಹುತೇಕ ಇಳಿಮುಖ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

873 ಜನರ ರಕ್ಷಣೆ: ಇನ್ನು ವರುಣನ ರೌದ್ರಾವತಾರಕ್ಕೆ ನಲುಗಿರುವ ಕೊಡಗಿನಲ್ಲಿ ಇಡೀ ರಕ್ಷಣಾ ಪಡೆಯೇ ಬೀಡು ಬಿಟ್ಟಿದ್ದು,
ಇದುವರೆಗೆ 873 ಜನರನ್ನು ರಕ್ಷಿಸಿದೆ. 20ಕ್ಕೂ ಅಧಿಕ ಗಂಜಿಕೇಂದ್ರಗಳನ್ನು ತೆರೆದಿದ್ದು, ಜನರ ರಕ್ಷಣಾ ಕಾರ್ಯ ಮುಂದುವರಿದಿದೆ. 60 ಸೈನಿಕರನ್ನು ಒಳಗೊಂಡ ಭಾರತೀಯ ಸೇನೆಯ ಒಂದು ತುಕಡಿ, 73 ಬೋಟ್‌ಗಳು ಮತ್ತಿತರ ಉಪಕರಣಗಳನ್ನು ಹೊಂದಿದ ಎಂಜಿನಿಯರಿಂಗ್‌ ಕಾರ್ಯಪಡೆ, 12 ಜನರ ನೌಕಾಪಡೆಯ ತಂಡ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಲಾ 30 ಜನರ ತಂಡಗಳು ಮತ್ತು ಬೋಟ್‌ಗಳು, 45 ಜನರ ನಾಗರಿಕ ರಕ್ಷಣಾ ಪಡೆ, 200 ಜನರ ಅಗ್ನಿಶಾಮಕ ದಳದ ಸಿಬ್ಬಂದಿ, ಎಂ-17 ಹೆಲಿಕಾಪ್ಟರ್‌ ನೊಂದಿಗೆ ಭಾರತೀಯ ವಾಯುಸೇನೆಯ ಒಂದು ತಂಡ ಕೂಡ ಬಂದಿಳಿದಿದೆ.

Advertisement

ಕೇವಲ ಎರಡು ದಿನಗಳಲ್ಲಿ (ಆಗಸ್ಟ್‌ 14 ಮತ್ತು 15) ಕೊಡಗಿನಲ್ಲಿಯ ಮಳೆಗೆ ಆರು ಜನ ಬಲಿಯಾಗಿದ್ದು, 845 ಮನೆಗಳು ಜಖಂಗೊಂಡಿವೆ. 98 ರಸ್ತೆಗಳು, 58 ಸೇತುವೆಗಳು, 243 ಸರ್ಕಾರಿ ಕಟ್ಟಡಗಳು ಕುಸಿದಿವೆ. 3006 ವಿದ್ಯುತ್‌ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳು ಕೊಚ್ಚಿಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next