Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಮನೋಡ್ಡಂಪಲ್ಲಿ ಮಧ್ಯಾಹ್ನ ಸಿಡಿಲು ಬಡಿದು ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರಿಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.
Related Articles
Advertisement
ಸೋಮವಾರ ಸಂಜೆ ಚಿಕ್ಕಬಳ್ಳಾಪುರದಲ್ಲಿ 58 ಮಿ.ಮೀ., ಹಾಸನ 43, ತುಮಕೂರು 59, ಬೆಂಗಳೂರು ಗ್ರಾಮಾಂತರ 36.5, ಬಳ್ಳಾರಿ 33, ಚಿತ್ರದುರ್ಗ 27.4, ಕೋಲಾರ 28, ಮಂಡ್ಯ 18.3, ಮೈಸೂರು 23 ಮಿ.ಮೀ. ಮಳೆ ದಾಖಲಾಗಿದೆ.
ಆಲಿಕಲ್ಲು ರಾಶಿ ನೋಡಿ ಬೆಚ್ಚಿಬಿದ್ದ ಜನಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಗುಡುಗು ಸಿಡಿಲಿನ ಜತೆಗೆ ಅಬ್ಬರಿಸಿದ ಅಕಾಲಿಕ ಮಳೆಯಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲೂಕಿನ ವಿವಿಧೆಡೆಗಳಲ್ಲಿ ಬಿದ್ದ ರಾಶಿ ರಾಶಿ ಆಲಿಕಲ್ಲು ಗಡ್ಡೆಗಳನ್ನು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ರಾಶಿರಾಶಿ ಆಲಿಕಲ್ಲುಗಳನ್ನು ಜನ ಕೈಯಲ್ಲಿ ಹಿಡಿದು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿಯೂ ಆಲಿ ಕಲ್ಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಸಂಜೆ 5.30 ಸುಮಾರಿಗೆ ಶುರುವಾದ ಬಿರುಗಾಳಿಗೆ ತೆಂಗಿನ ಮರಗಳು, ರಸ್ತೆ ಬದಿಯ ಗಿಡಗಳು ನೆಲಕ್ಕೆ ಉರುಳಿದವು.