Advertisement

ಸಿಡಿಲಬ್ಬರ ಮಳೆ: 7 ಮಂದಿ ಸಾವು

11:51 AM May 08, 2017 | Team Udayavani |

ಬೆಂಗಳೂರು: ಮಾಗಡಿ, ಕೊಪ್ಪಳ, ಹಾಸನ ಸಹಿತ ರಾಜ್ಯದ ಹಲವೆಡೆ ರವಿವಾರವೂ ಮಳೆ ಯಾಗಿದ್ದು, ಸಿಡಿಲಬ್ಬರದ ಮಳೆಗೆ 7 ಮಂದಿ ಬಲಿ ಯಾಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಗಾಳಿ, ಮಳೆಗೆ ಮರಗಳು ಉರುಳಿ ಬಿದ್ದು, ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಪೆಗಳಪಲ್ಲಿಯಲ್ಲಿ ಆಂಜಿನಪ್ಪ (43) ಸಿಡಿಲಿಗೆ ಬಲಿಯಾಗಿದ್ದಾರೆ.

Advertisement

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಬಾಲಕ ಮನು (12) ಮೃತಪಟ್ಟಿದ್ದಾನೆ. ಅವರ ತಂದೆ ಶಿವರಾಜೇಗೌಡ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಬಾದಿಮನಾಳದಲ್ಲಿ ಸಿಡಿಲಿಗೆ ರೇಣುಕಾ ಪ್ರಭಾಕರ ಪರಸಾಪುರ (28) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿಯಿತು. ಕುಷ್ಟಗಿ ತಾಲೂಕಿನ ನೆರೆಬಂಚಿಯಲ್ಲಿ ಟ್ರಾÂಕ್ಟರ್‌ನಿಂದ ಗೊಬ್ಬರ ಇಳಿಸುತ್ತಿದ್ದಾಗ ಸಿಡಿಲು ಬಡಿದು ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದ ಲಕ್ಷ್ಮಣ ಶರಣಪ್ಪ ಬಿಜಕಲ್‌ (28) ಅಸುನೀಗಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಕೆ.ಕೆ. ಕೊಪ್ಪ ಗ್ರಾಮದ ರುದ್ರವ್ವ ಚಂದ್ರಪ್ಪ ಹುಡ್ಯಾನಟ್ಟಿ (29), ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆ ಸಮೀಪ ಕರಿಗೆರಸು ಗ್ರಾಮದ ರಮೇಶ (40) ಸಿಡಿಲಿಗೆ ಬಲಿಯಾಗಿದ್ದಾರೆ. ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ ಸಿಡಿಲಿಗೆ ರೈತ ಹನೀಫ್‌ ಸಾಬ್‌ (34) ಮೃತಪಟ್ಟಿದ್ದಾರೆ. 

ಸಿಡಿಲಿನ ಹೊಡೆತಕ್ಕೆ ಬಂಡೆ ಸ್ಫೋಟ
ಉಗರಗೋಳ ತಾಲೂಕಿನ ಚುಳಕಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಚುಳಕಿ ಗುಡ್ಡದ ಬಂಡೆಯೊಂದು ಒಡೆದು ಚೂರುಗಳಾಗಿ ಗ್ರಾಮದ ಮನೆಗಳತ್ತ ಬಿತ್ತು. ಚಿಕ್ಕುಂಬಿ-ಚುಳಕಿ ಗ್ರಾಮದ ನಡುವಿನ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ವೀರದೇವನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಹಸುವೊಂದು ಬಲಿಯಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹುಣಸೆಪಂಚೆಯಲ್ಲಿ ಸಿಡಿಲು ಬಡಿದು ಎತ್ತೂಂದು ಮೃತಪಟ್ಟಿದೆ. ಗ್ರಾಮದ ಹಲವು ಮನೆಗಳ ಶೀಟ್‌ಗಳು ಹಾರಿಹೋಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಕೂಡ್ಲಿಗಿ ತಾಲೂಕಿನ ಹರಾಳು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಗೆ 25ಕ್ಕೂ ಹೆಚ್ಚು ಎಕ್ರೆ ಪ್ರದೇಶದ ಬೆಳೆಗಳಿಗೆ ಹಾನಿ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next