Advertisement

ಮಹಾಮಳೆ: ಕೊಡಗಿನಲ್ಲಿ ಏಳು ಸಾವು

01:24 AM Aug 10, 2019 | mahesh |

ಮಂಗಳೂರು/ ಉಡುಪಿ: ನಾಗರ ಪಂಚಮಿಯ ಮರುದಿನದ ಬಳಿಕ ಎರಡು ದಿನಗಳ ಕಾಲ ಕೊಂಚ ವಿರಾಮ ನೀಡಿದ್ದ ಮಳೆ ಶುಕ್ರವಾರ ಕರಾವಳಿ, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಮತ್ತು ಒಳನಾಡುಗಳಲ್ಲಿ ಜೋರಾಗಿ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಗ್ರಾಮಾಂತರ ಭಾಗದಲ್ಲಿ ಹಲವಾರು ಮನೆಗಳು, ರಸ್ತೆಗಳು ಮತ್ತು ಸೇತುವೆಗಳು ತೊಂದರೆಗೀಡಾಗಿವೆ. ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನೇತ್ರಾವತಿ, ಕುಮಾರ ಧಾರಾ ನದಿಗಳು ಉಕ್ಕಿಹರಿದು ಶುಕ್ರವಾರ ರಾತ್ರಿ ಏಳರ ಸುಮಾರಿಗೆ ಉಪ್ಪಿನಂಗಡಿಯಲ್ಲಿ ಸಂಗಮಿಸಿವೆ. ಬಂಟ್ವಾಳದಲ್ಲಿ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಸತತ
ಐದನೇ ದಿನವಾದ ಶನಿವಾರವೂ ಜಿಲ್ಲಾಡಳಿತ ಗಳು ರಜೆ ಘೋಷಿಸಿವೆ.

ಕೊಡಗಿನಲ್ಲಿ ಭೂಕುಸಿತ; ಏಳು ಸಾವು
ಕೊಡಗಿನಲ್ಲಿ ಸತತ ನಾಲ್ಕನೇ ದಿನವೂ ಮಹಾಮಳೆ ಮುಂದುವರಿದಿದ್ದು, ಕೋರಂಗಾಲ ಮತ್ತು ತೋರ ಎಂಬಲ್ಲಿ ಭೂಕುಸಿತ ಸಂಭವಿಸಿ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ. ಭಾಗಮಂಡಲ – ತಲಕಾವೇರಿ ರಸ್ತೆ ಕಡಿತವಾಗಿದೆ.
ಉಡುಪಿ ಜಿಲ್ಲೆಯಲ್ಲಿಯೂ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ತೀವ್ರ ಹಾನಿಯ ವರದಿಯಾಗಿಲ್ಲ.

ಜಿಲ್ಲಾಧಿಕಾರಿಗೂ ಟ್ರೋಲ್‌; ಸಮರ್ಥನೆ
ಹವಾಮಾನ ಇಲಾಖೆಯ ಮುನ್ಸೂಚನೆ ಅನುಲಕ್ಷಿಸಿ ಸತತ ನಾಲ್ಕು ದಿನಗಳ ಕಾಲ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೊಳಗಾಯಿತು. ಉಡುಪಿ ಜಿಲ್ಲೆಯಲ್ಲೂ ಸತತ ರಜೆ ಘೋಷಣೆಯಾಗಿದ್ದರೂ ದ.ಕ.
ಜಿಲ್ಲಾಧಿಕಾರಿ ಮಾತ್ರ ಟ್ರೋಲ್‌ಗೊಳಗಾ ದದ್ದು ವಿಶೇಷ. ಈ ಹಿಂದಿನ ವರ್ಷಗಳಲ್ಲಿ ಶಾಲೆಗೆ ತೆರಳುವ ಸಂದರ್ಭದಲ್ಲಿಯೇ ಪುಟ್ಟ
ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿ ರುವ ಘಟನೆಗಳು ನಡೆದಿದ್ದವು. ಆದ್ದರಿಂದ ಮಕ್ಕಳ ಸುರಕ್ಷತೆಗಾಗಿ ಸೆಂಥಿಲ್‌ ಕೈಗೊಂಡಿರುವ ನಿರ್ಧಾರ ಸರಿ ಎಂದು ಸಮರ್ಥಿ ಸಿಕೊಂಡ ಟ್ರೋಲ್‌ಗ‌ಳೂ ಹರಿದಾಡಿದವು.

ಕಾಟಾಜೆ: ವೃದ್ಧನ ರಕ್ಷಣೆ
ನೆರಿಯ ಗ್ರಾಮದ ಕಾಟಾಜೆಯ‌ಲ್ಲಿ ದನವನ್ನು ಮೇಯಲು ಕಟ್ಟಲು ಬಯಲು ಪ್ರದೇಶಕ್ಕೆ ತೆರಳಿದ್ದ ವೃದ್ಧ ಡೀಕಯ್ಯ ಗೌಡ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಅವರ ಪುತ್ರ ತೆರಳಿ ರಕ್ಷಣೆ ಮಾಡಿದ್ದಾರೆ.

Advertisement

ಹೋರಿಯ ರಕ್ಷಣೆ
ವಿಟ್ಲದ ಒಕ್ಕೆತ್ತೂರು ನದಿಯಲ್ಲಿ ಶುಕ್ರವಾರ ಕೊಚ್ಚಿಕೊಂಡು ಹೋಗುತ್ತಿದ್ದ ಹೋರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಬಸ್‌ ಸಂಚಾರ ರದ್ದು
ಮಂಗಳೂರು – ಬೆಂಗಳೂರು ನಡುವಣ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಸಂಚಾರವನ್ನು ರಾತ್ರಿ 10.30ರ ಬಳಿಕ ರದ್ದುಗೊಳಿಸಲಾಗಿದೆ.

ಕಂಟ್ರೋಲ್‌ ರೂಂ ನಂಬರ್‌
ದಕ್ಷಿಣ ಕನ್ನಡ: 0824-2442590
ಉಡುಪಿ: 0820-2574802
ಉತ್ತರ ಕನ್ನಡ: 0838-2229857
ಕೊಡಗು: 0827-2221077
ಹಾಸನ: 0817-2261111
ಚಿಕ್ಕಮಗಳೂರು: 0826-2238950
ಶಿವಮೊಗ್ಗ: 0818-2271101
ರಾಜ್ಯ ತುರ್ತು ಪರಿಹಾರ ಕೇಂದ್ರ
080-1070, 080-22340676
ವಾಟ್ಸ್‌ಆ್ಯಪ್‌: 9008405955
ಅಗ್ನಿ ಶಾಮಕ ಹಾಗೂ ತುರ್ತು ಸೇವೆ
080-25573333
ವಾಟ್ಸ್‌ಆ್ಯಪ್‌: 9513749080

Advertisement

Udayavani is now on Telegram. Click here to join our channel and stay updated with the latest news.

Next