Advertisement
ಇಲ್ಲಿ ಕಳೆದ ಜು. 4ರಂದು ಮೊದಲ ಬಾರಿಗೆ ನೆರೆಯಾಗಿತ್ತು. ಸಂಪರ್ಕ ರಸ್ತೆ ಕಡಿತಗೊಂಡಿದ್ದು, ಸಂಚಾರಕ್ಕೆ ಜನ ದೋಣಿಯನ್ನೇ ಆಶ್ರಯಿಸುವಂತಾಗಿದೆ.
ಇಲ್ಲಿನ ನೂರಾರು ಎಕರೆ ಗದ್ದೆಗಳು ಕಳೆದ 10 ದಿನಗಳಿಂದಲೂ ಮುಳುಗಡೆಯಾಗಿವೆ. ಎರಡೂ ನೆರೆಗಂತೂ ಕೆಲ ದಿನಗಳ ಹಿಂದಷ್ಟೇ ನೆಟ್ಟ ನೇಜಿ ಕೊಳೆತು ಹೋಗುವ ಸಾಧ್ಯತೆ ಇದೆ. ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Related Articles
ನೆರೆ ಬಾಧಿತ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭ ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಕುಂದಾಪುರ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್., ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement