Advertisement

Hanagodu: ಭಾರೀ ಮಳೆ, ಪಂಚವಳ್ಳಿ ರಸ್ತೆ ಬಂದ್; ಓಂಕಾರೇಶ್ವರ ದೇವಾಲಕ್ಕೆ ನುಗ್ಗಿದ ಮಳೆ ನೀರು

08:37 AM Oct 12, 2023 | Team Udayavani |

ಹುಣಸೂರು: ತಾಲೂಕಿನ ಹನಗೋಡು ಭಾಗದ ಗ್ರಾಮಗಳಲ್ಲಿ ಆ.11ರ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಕಡೇಮನುಗನಹಳ್ಳಿ ಬಳಿಯ ಶ್ರೀ ಓಂಕಾರೇಶ್ವರ ದೇವಾಲಯ ನೀರಿನಿಂದ ಆವೃತವಾಗಿದ್ದರೆ, ಹೆಬ್ಬಾಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.

Advertisement

ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಸತತ ಮಳೆಯಿಂದಾಗಿ ನಾಗರಹೊಳೆ ಉದ್ಯಾನ, ಅಂಚಿನ ಗ್ರಾಮಗಳಾದ ಬೆಕ್ಕೆಶೆಡ್, ಕಿಕ್ಕೇರಿಕಟ್ಟೆ, ಕಡೇಮನುಗನಹಳ್ಳಿ ಭಾಗದಿಂದ ಭಾರೀ ಪ್ರಮಾಣದ ನೀರು ಒಮ್ಮೆಲೆ ಹರಿದು ಬಂದಿದ್ದರಿಂದ ದೇವಾಲಯಕ್ಕೆ ನೀರು ನುಗ್ಗಿ ಆವರಣ ಜಲಾವೃತವಾಗಿದೆ.

ಅದಲ್ಲದೆ ಜಮೀನುಗಳಲ್ಲೂ ಭಾರೀ ಪ್ರಮಾಣದ ನೀರು ನಿಂತಿದೆ. ಈ ಭಾಗದ ಹತ್ತಾರು ಕೆರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ಹನಗೋಡು-ಪಂಚವಳ್ಳಿ ರಸ್ತೆ ಬಂದ್:

ನಾಗರಹೊಳೆ ಉದ್ಯಾನದಿಂದ ಹರಿದು ಬರುವ ನೀರಿನಿಂದ ಹೆಬ್ಬಾಳ ತುಂಬಿ ಹರಿಯುತ್ತಿದ್ದು ಬುಧವಾರ ಸಂಜೆಯಿಂದಲೇ ನೇರಳಕುಪ್ಪೆ-ಪಂಚವಳ್ಳಿ ಮುಖ್ಯರಸ್ತೆಯ ಹೆಬ್ಬಾಳದ ಹಳ್ಳದ ಮೇಲೆ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.

Advertisement

ನೀರಿನ ಹರಿವನ್ನು ಹಾಗೂ ದೇವಾಲಯಕ್ಕೆ ತುಂಬಿರುವ ನೀರನ್ನು ನೋಡಲು ಸಾಕಷ್ಟು ಮಂದಿ ಗ್ರಾಮಸ್ಥರು ನೆರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next