ಹಗಲು ವೇಳೆ ಬಿಸಿಲ ವಾತಾವರಣವಿತ್ತು. ಸಂಜೆಯಾಗುತ್ತಲೇ ಗ್ರಾಮೀಣ ಭಾಗದಲ್ಲಿ ದಟ್ಟ ಮೋಡ ಕವಿದು ಮಳೆಯಾಗಿದೆ.ಬೆಳ್ತಂಗಡಿಯಲ್ಲಿ ಸಂಜೆ ಬಳಿಕ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಸುಳ್ಯ ತಾಲೂಕಿನಲ್ಲೂ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಪುತ್ತೂರಿನಲ್ಲೂ ರಾತ್ರಿ ವೇಳೆ ಮಳೆಯಾಗಿದೆ.
Advertisement
ಬೆಳ್ತಂಗಡಿ ತಾಲೂಕಿನ ಹಲವೆಡೆ ಸಂಜೆ 5 ಗಂಟೆ ಬಳಿಕ ಗುಡುಗು, ಮಿಂಚು ಸಹಿತ ಅರ್ಧ ತಾಸು ಭಾರೀ ಮಳೆಯಾಗಿದೆ. ರಸ್ತೆಯಲ್ಲಿ ಬಹಳಷ್ಟು ನೀರು ಹರಿದು ಬಂದಿದ್ದು, ಕೆಸರುಮಯವಾಗಿತ್ತು. ಕೆಲವೆಡೆ ರಾತ್ರಿ ಮಳೆಯಾಗಿದೆ. ಕರಾವಳಿಗೆ ಶುಕ್ರವಾರ ಮತ್ತು ಶನಿವಾರವೂ ಎಲ್ಲೋ ಅಲರ್ಟ್ ನೀಡಲಾಗಿದೆ. ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
ಬೆಳ್ತಂಗಡಿ: ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಕಕ್ಕಿಂಜೆಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಕಕ್ಕಿಂಜೆ ಗಾಂಧೀನಗರ ನಿವಾಸಿ ಸಾರಮ್ಮ ಅವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಸಂಭವನೀಯ ಅಪಾಯ ತಪ್ಪಿದೆ.
Advertisement