Advertisement

ನಿರಂತರ ಮಳೆಗೆ ಬೆಳೆ ಹಾನಿ: ಎರಡನೇ ಬಾರಿಗೆ ಬಿತ್ತನೆಗೆ ರೈತರ ಅಣಿ

02:42 PM Oct 29, 2020 | sudhir |

ದೋಟಿಹಾಳ: ಉತ್ತರ ಮತ್ತು ಹಸ್ತಾ ಮಳೆಗೆ ಬಿತ್ತನೆ ಮಾಡಿದ ಬೆಳೆ ನಿರಂತರ ಮಳೆಯಿಂದ ಮೊಳಕೆ ಒಡೆಯದೇ ಬೆಳೆ ಕೈಕೊಟ್ಟಿದ್ದರಿಂದ ಮತ್ತೂಮ್ಮೆ ಬಿತ್ತನೆಗೆ ಈಗ ರೈತರು ಅಣಿಯಾಗುತ್ತಿದ್ದಾರೆ.

Advertisement

ಕಳೆದ ಒಂದು ವಾರದ ಹಿಂದೇ ಸುರಿದ ಮಳೆಯಿಂದ ಗ್ರಾಮದ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆ ಮೊಳಕೆ ಕಾಣದೆ ಹಾಳಾಗಿ
ಹೋಗಿರುವುದರಿಂದ ಅನೇಕ ರೈತರು ಈಗ ಮತ್ತೂಮ್ಮ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ.

ಟಕಳ್ಳಕಿ ಗ್ರಾಮದ ರೈತ ವೀರಯ್ಯ ವಸ್ತ್ರದ ಅವರ ಮೂರು ಎಕರೆ ಹೊಲದಲ್ಲಿ ಕಳೆದ 22 ದಿನಗಳ ಹಿಂದೇ ಕಡಲೆ ಬೆಳೆಯನ್ನು ಸುಮಾರು 15 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದರು. ಅತಿಯಾದ ಮಳೆಯಿಂದ ಬಿತ್ತಿದ ಬೀಜ ಮೊಳಕೆ ಕಾಣದೇ ಬೆಳೆ ಕೈಕೊಟ್ಟಿದ್ದರಿಂದ ಹೀಗ ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆಗೆ ಮುಂದಾಗಿದ್ದಾರೆ.

ಈ ಬಾರಿ ಬಹುತೇಕ ರೈತರು ಕಡಲೆ, ಬಿಳಿಜೋಳದ ಜೊತೆಗೆ ಕುಸುಬೆ, ಅಗಸಿ ಬೆಳೆಗಳನ್ನು ಮಿಶ್ರಬೆಳೆಗಳಾಗಿ ಬೆಳೆಯುತ್ತಿದ್ದಾರೆ.
ಕೆಲವರು ಬಿಳಿಜೋಳ ಬೆಳೆಯುವುದರಿಂದ “ನಮಗಾ ತಿನ್ನಾಕ ಜೋಳ ಸಿಗುತಾವ್ರಿ, ಅಲ್ಲದೆ ದನಕರುಗಳಿಗೂ ಮೇವು ಸಿಗತೈತ್ರೀ’ ಎಂದು ರೈತರು ತಿಳಿಸಿದರು.

ಇದನ್ನೂ ಓದಿ:ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

Advertisement

ಗ್ರಾಮದ ಸುತ್ತಮುತ್ತಲು ಬಿತ್ತನೆ ಕಾರ್ಯಗಳು ಚುರುಕುಗೊಂಡಿದ್ದು ರೈತರು ಎತ್ತಿನ ಬಂಡಿಗಳಲ್ಲಿ ಹೊಲಗಳಿಗೆ ತೆರಳುತ್ತಿರುವ
ದೃಶ್ಯಗಳು ಮರುಕಳಿಸಿವೆ. ಹಿಂಗಾರೂ ಬಿತ್ತನೆ ಮಾಡುವ ಕೂರಿಗೆ ಮತ್ತು ಹಿಂದೆ ಸಾಲು ಕಲೆಸುವ ಜೋಡಿ ಗಳೇವಿಗೆ ದಿನಕ್ಕೆ 2000ರೂ. ಗಳವರೆಗೆ ಬಾಡಿಗೆ ಇದೆ. ಬೀಜ ಅಕ್ಕಡಿ ಹಾಕುವ ಆಳುಗಳಿಗೆ ಕೂಲಿ 200ಕ್ಕೆ ಏರಿದೆ. ಹೊಟ್ಟು, ಮೇವು ಸೇರಿದಂತೆ ಕೃಷಿ
ಪರಿಕರಗಳು ಕೂಡ ದುಬಾರಿ ಆಗಿರುವುದರಿಂದ ರೈತರು ಕೃಷಿ ಮಾಡುವುದು ಸದ್ಯ ವರ್ಷದಿಂದ ವರ್ಷಕ್ಕೆ ಬಹಳ ಕಷ್ಟವಾಗುತ್ತದೆ ಎಂದು ರೈತರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next