Advertisement

ಭಾರೀ ಮಳೆ: ಮೊಣ್ಣಂಗೇರಿ ಗುಡ್ಡ ಕುಸಿದು ರಸ್ತೆ ಬಂದ್‌

07:36 PM Jul 22, 2019 | Sriram |

ಸಂಪಾಜೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದ ಮೊಣ್ಣಂಗೇರಿಯಲ್ಲಿ ಇಂದು ಸಂಜೆ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ.

Advertisement

ಮೊಣ್ಣಂಗೇರಿ ಸಂಪರ್ಕಿಸುವ ರಸ್ತೆಯ ಮೇಲೆ ಧರೆ ಕುಸಿದಿದೆ. ಹೀಗಾಗಿ ಸಂಪರ್ಕ ಕಡಿತಗೊಂಡಿದೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿತ್ತು. ಈಗ ಅದೇ ಮಾದರಿಯಲ್ಲಿ ಕುಸಿತವಾಗಿದ್ದು ಕೆಸರು ಮಣ್ಣು ಹರಿದಿದೆ ಎಂದು ತಿಳಿಸಿದ್ದಾರೆ. ಕೆಲ ಹೊತ್ತಿನ ಮೊದಲು ಇನ್ನೊಂದು ಪ್ರದೇಶದಲ್ಲೂ ಕುಸಿತಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

4 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕುಸಿತಗೊಂಡ ಮಣ್ಣು ತೆರವು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next