Advertisement
ನಿರಂತರವಾಗಿ ಮಳೆ ಸುರಿದರೆ ಹೊಳೆ ತಟದ ಕೃಷಿ ತೋಟಗಳು ಮುಳುಗಡೆಯಾಗಲಿವೆ. ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವಲ್ಲಿ ಗೌರಿಹೊಳೆಗೆ ಅಡ್ಡಲಾಗಿರುವ ಕುಂಡಡ್ಕ ಕಿರು ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಇದೆ. ತೀರಾ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತಕ್ಕೆ ಬಂದಿರುವ ಸೇತುವೆಯೂ ಕೊಚ್ಚಿ ಹೋಗುವ ಭೀತಿಯನ್ನು ಜನತೆ ಎದುರಿಸುತ್ತಿದ್ದಾರೆ.
Related Articles
Advertisement
ಸಮಸ್ಯೆ ಪರಿಹಾರಕ್ಕೆ ಒತ್ತಾಯಪ್ರತೀ ಬಾರಿಯೂ ಮಳೆ ಬಂದಾಗ ಇಲ್ಲಿನ ಸೇತುವೆಯಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿದೆ. ಸೇತುವೆಯೂ ದುರ್ಬಲವಾಗಿದೆ. ಸೇತುವೆ ದುರಸ್ತಿಗೊಳಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ಮಾತ್ರ ದೊರಕುತ್ತಿದೆ. ಮುಂದಿನ ಬಾರಿಯಾದರೂ ಈ ಅಪಾಯಕಾರಿ ಸನ್ನಿವೇಶ ಬಾರದಂತೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕೇಳಿಕೊಳ್ಳಲಾಗುವುದು ಎಂದು ಚೆನ್ನಾವರ ಅಭ್ಯುದಯ ಯುವಕ ಮಂಡಲದ ಪದಾಧಿಕಾರಿಗಳು ತಿಳಿಸಿದ್ದಾರೆ. ತೋಟಕ್ಕೆ ನೀರು ನುಗ್ಗುವ ಭೀತಿ
ಬೆಳ್ಳಾರೆಯಿಂದ ಪೆರುವಾಜೆ-ಕುಂಡಡ್ಕ-ನಾಡೋಳಿ-ಸಾರಕರೆ-ಸರ್ವೆ-ಮೂಲಕ ವೀರಮಂಗಲ ತನಕವೂ ಹೊಳೆಯ ಎರಡೂ ಬದಿಗಳಲ್ಲಿ ತೋಟಗಳಿದ್ದು, ಮಳೆ ಇದೇ ರೀತಿ ಮುಂದುವರಿದರೆ ತೋಟಕ್ಕೆ ಮಳೆ ನೀರು ನುಗ್ಗುವ ಭೀತಿಯನ್ನು ಕೃಷಿಕರು ಎದುರಿಸುತ್ತಿದ್ದಾರೆ. ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಿಂದಾಗಿ ಕೆರೆ, ತೋಡು, ಹಾಗೂ ಕುಮಾರಧಾರಾದಂತಹ ದೊಡ್ಡನದಿಗಳು ಅಪಾಯಕಾರಿ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆಗಳಿವೆ. ಸಾರ್ವಜನಿಕರು ಅಥವಾ ಮಕ್ಕಳು ನೀರಿನ ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚು ಮಳೆಯಿಂದಾಗಿ ಪರಿಸರದಲ್ಲಿ ಅವಘಡಗಳೇನಾದರೂ ಸಂಭವಿಸಿದರೆ ತತ್‌ಕ್ಷಣ ಠಾಣೆಯ ದೂರವಾಣಿ (08257-271995) ಅಥವಾ ತಮ್ಮ ಮೊಬೈಲ್ (9743053901) ಸಂಖ್ಯೆಗೆ ಮಾಹಿತಿ ನೀಡಿ ಸಹಕರಿಸಿ. ಅನಾಹುತಗಳನ್ನು ನಿಯಂತ್ರಿಸಲು ಕೈಜೋಡಿಸಿ ಎಂದು ಬೆಳ್ಳಾರೆ ಠಾಣೆ ಪಿಎಸ್‌ಐ ಡಿ.ಎನ್. ಈರಯ್ಯ ಮನವಿ ಮಾಡಿದ್ದಾರೆ. ಠಾಣಾಧಿಕಾರಿ ಮನವಿ
ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಿಂದಾಗಿ ಕೆರೆ, ತೋಡು, ಹಾಗೂ ಕುಮಾರಧಾರಾದಂತಹ ದೊಡ್ಡನದಿಗಳು ಅಪಾಯಕಾರಿ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆಗಳಿವೆ. ಸಾರ್ವಜನಿಕರು ಅಥವಾ ಮಕ್ಕಳು ನೀರಿನ ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚು ಮಳೆಯಿಂದಾಗಿ ಪರಿಸರದಲ್ಲಿ ಅವಘಡಗಳೇನಾದರೂ ಸಂಭವಿಸಿದರೆ ತತ್‌ಕ್ಷಣ ಠಾಣೆಯ ದೂರವಾಣಿ (08257-271995) ಅಥವಾ ತಮ್ಮ ಮೊಬೈಲ್ (9743053901) ಸಂಖ್ಯೆಗೆ ಮಾಹಿತಿ ನೀಡಿ ಸಹಕರಿಸಿ. ಅನಾಹುತಗಳನ್ನು ನಿಯಂತ್ರಿಸಲು ಕೈಜೋಡಿಸಿ ಎಂದು ಬೆಳ್ಳಾರೆ ಠಾಣೆ ಪಿಎಸ್‌ಐ ಡಿ.ಎನ್. ಈರಯ್ಯ ಮನವಿ ಮಾಡಿದ್ದಾರೆ.