ತಿರುವನಂತಪುರ/ಹೊಸದಿಲ್ಲಿ: ಎಡೆಬಿಡದೆ ಸುರಿಯುತ್ತಿರುವ ಮಳೆ, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಸರಣಿ ಭೂಕುಸಿತಗಳು ಕೇರಳಿಗರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಮಂಗಳವಾರವೂ ವರುಣನ ಆರ್ಭಟ ಮುಂದುವರಿದಿದ್ದು, ವಯನಾಡ್, ಕಲ್ಲಿ ಕೋಟೆ, ಮಳಪ್ಪುರಂ, ಕಣ್ಣೂರು, ಕಾಸರಗೋಡಿನಲ್ಲಿ ಭೂಕುಸಿತ ಸಂಭವಿಸಿದೆ. ಈವರೆಗೆ 215 ಭೂ ಕುಸಿತಗಳು ಸಂಭವಿಸಿದ್ದು, 444 ಗ್ರಾಮಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಅಧಿಕೃತ ಓಣಂ ಆಚರಣೆಯನ್ನು ಸರಕಾರ ರದ್ದುಗೊಳಿ ಸಿದ್ದು, ಅದಕ್ಕೆಂದು ಮೀಸಲಿಟ್ಟ ಹಣವನ್ನು ಪರಿಹಾರ ಕಾರ್ಯಾಚರಣೆಗೆ ಬಳಸುವುದಾಗಿ ಸಿಎಂ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಬುಧವಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋ ಜಿಸಬೇಕಾಗಿದ್ದ ಔತಣಕೂಟವನ್ನೂ ರಾಜ್ಯಪಾಲ ಪಿ.ಸದಾಶಿವಂ ಅವರು ರದ್ದುಗೊಳಿಸಿದ್ದಾರೆ.
ಇಡುಕ್ಕಿ ಬಳಿಕ ಮುಲ್ಲಪೆರಿಯಾರ್: ಇಡುಕ್ಕಿ ಜಲಾಶಯ ಸೃಷ್ಟಿಸಿದ್ದ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವಾಗಲೇ ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರ ಏರಿಕೆ ಕಂಡಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡಿಸಿದೆ. ಇಲ್ಲಿನ ಗರಿಷ್ಠ ನೀರಿನ ಮಟ್ಟ 142 ಅಡಿ ಆಗಿದ್ದು, ಈಗಾಗಲೇ 136.10 ಅಡಿ ತಲುಪಿದೆ. ಹೀಗಾಗಿ, ಎಚ್ಚರಿಕೆಯಲ್ಲಿರುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
ಉತ್ತರವೂ ತತ್ತರ: ಉತ್ತರ ಭಾರತದಲ್ಲೂ ಭಾರೀ ಮಳೆಯಾಗುತ್ತಿದ್ದು, ಜಮ್ಮುವಿನಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ನಾಲ್ವರು ಬಲಿಯಾಗಿ ದ್ದಾರೆ. 24ಕ್ಕೂ ಹೆಚ್ಚು ಮನೆಗಳು, ವಾಹ ನ ಗಳಿಗೆ ಹಾನಿ ಯಾಗಿವೆ. ಹಿಮಾಚಲ ಪ್ರದೇಶ ದಲ್ಲಿ 5 ವರ್ಷದ ಬಾಲಕ ನೀರಿನಲ್ಲಿ ಮುಳುಗಿದ್ದು, ಮೃತರ ಸಂಖ್ಯೆ 2 ದಿನಗಳಲ್ಲಿ 19ಕ್ಕೇರಿದೆ. ಇದೇ ವೇಳೆ, ಉತ್ತರಪ್ರದೇಶದಲ್ಲಿ ಮಳೆ ಸಂಬಂಧಿ ಘಟನೆಗಳಿಂದ ನಾಲ್ವರು ಮೃತಪಟ್ಟಿದ್ದಾರೆ.
ಪೂಜೆಗೆ ಅಡ್ಡಿಯಿಲ್ಲ
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ “ನಿರಪುಥಾರಿ’ ಪೂಜೆಯು ನಿಗದಿಯಂತೆ ನಡೆಯಲಿದ್ದು, ಸುಗಮವಾಗಿ ಸಾಗಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ. ಬುಧವಾರ ಬೆಳಗ್ಗೆ ಈ ಪೂಜೆ ನಡೆಯಲಿದೆ. ಪಂಪಾ ನದಿ ಅಪಾಯದ ಮಟ್ಟದಲ್ಲಿ ಹರಿಯು ತ್ತಿರುವ ಕಾರಣ ಸದ್ಯಕ್ಕೆ ದೇವಸ್ಥಾನದ ಕಡೆಗೆ ಬರಬೇಡಿ ಎಂದು ಅಯ್ಯಪ್ಪ ಭಕ್ತರಿಗೆ ಸೋಮ ವಾರವಷ್ಟೇ ಟಿಡಿಬಿ ಸಲಹೆ ನೀಡಿತ್ತು. ಆದರೂ, ಈ ವಿಚಾರ ಅರಿವಿಲ್ಲದೇ ದೇಗುಲ ತಲುಪಿರುವ ಭಕ್ತರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದೂ ಮಂಡಳಿ ತಿಳಿಸಿದೆ.