Advertisement
ರವಿವಾರ ರಾತ್ರಿ ಎಡೆಬಿಡದೆ ಸುರಿದಿದ್ದು, ಸೋಮ ವಾರ ಬೆಳಗ್ಗಿನಿಂದ ಮತ್ತಷ್ಟು ಬಿರುಸು ಗೊಂಡಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಮುನ್ನಚ್ಚರಿಕೆ ಕ್ರಮ ವಾಗಿ ಜಿಲ್ಲಾಡಳಿತವು ಜು. 4ರಂದು ಅಂಗನವಾಡಿಯಿಂದ ಎಸೆಸೆಲ್ಸಿ ತನಕದ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ.
Related Articles
ಕೇರಳ ರಾಜ್ಯದಲ್ಲಿಯೇ ಅತ್ಯಧಿಕ ಮಳೆ ಕಾಸರಗೋಡು ಜಿಲ್ಲೆಯ ಕೂಡ್ಲುವಿನಲ್ಲಿ (12 ಸೆಂ.ಮೀ.) ಸುರಿದಿದೆ.
Advertisement
ಶಾಲಾ ಆವರಣದಲ್ಲಿ ಮರ ಬಿದ್ದು ವಿದ್ಯಾರ್ಥಿನಿ ಸಾವುಕುಂಬಳೆ: ಸೋಮವಾರ ಸಂಜೆ ಬೀಸಿದ ಗಾಳಿ ಮಳೆಗೆ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿದ್ದ ಮರವೊಂದು ಮೈಮೇಲೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. 6ನೇ ತರಗತಿ ವಿದ್ಯಾರ್ಥಿನಿ ಪರ್ಲಾಡ ಬಿ.ಎಂ. ಯೂಸುಫ್ ಅವರ ಪುತ್ರಿ ಆಯಿಷತ್ ಮಿನ್ಹಾ (11) ಮೃತ ಬಾಲಕಿ. ಸಂಜೆ 4ಕ್ಕೆ ಶಾಲೆ ಬಿಡುವ ವೇಳೆಗೆ ಜೋರಾಗಿ ಬೀಸಿದ ಗಾಳಿ ಮಳೆಗೆ ಬೃಹತ್ ಮರ ಉರುಳಿದ್ದು, ಅದೇ ದಾರಿಯಾಗಿ ಸಹಪಾಠಿಯ ಜತೆ ನಡೆದು ಹೋಗುತ್ತಿದ್ದ ಬಾಲಕಿಯ ಮೇಲೆಯೇ ಬಿದ್ದಿತ್ತು. ರಿಫಾನಾ ಎಂಬ ವಿದ್ಯಾರ್ಥಿನಿಯೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾ ಗಿದೆ. ಶಾಲಾ ಅವರಣದಲ್ಲಿ ಹಲವು ಮರಗಳಿದ್ದು ಅವುಗಳ ಸಮೀಪವೇ ವಿದ್ಯುತ್ ತಂತಿಗಳೂ ಹಾದು ಹೋಗಿವೆ. ಅದೃಷ್ಟವಶಾತ್ ಮರದ ಕೊಂಬೆಗಳು ಅದರ ಮೇಲೆ ಬೀಳದ ಕಾರಣ ಸಂಭಾವ್ಯ ದುರಂತ ತಪ್ಪಿದೆ. ಈ ವೇಳೆ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದನ್ನು ನೋಡಿದ ಅಧ್ಯಾಪಕರು ಕೆಇಬಿಗೆ ಮಾಹಿತಿ ನೀಡಿದ್ದು, ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸಿದರು. ಬಿ.ಎಂ. ಯೂಸುಫ್ ಅವರ ಮೂವರು ಮಕ್ಕಳಲ್ಲಿ ಆಯಿಷತ್ ಕೊನೆಯವಳಾಗಿದ್ದಳು.