Advertisement

ಭಾರಿ ಮಳೆಗೆ ಕೊಯಿಲೂರ –ಪಗಲಾಪುರ ಸೇತುವೆಯ ರಸ್ತೆ ಕುಸಿದು ಸಂಚಾರ ಕಡಿತ

09:04 PM Jul 23, 2020 | sudhir |

ಯಾದಗಿರಿ : ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ತಾಲೂಕಿನ ಕೊಯಿಲೂರ – ಪಗಲಾಪುರ ಸೇತುವೆಯ ರಸ್ತೆ ಕುಸಿತದಿಂದ ಸಂಪರ್ಕ ಕಡಿತವಾಗಿದೆ.

Advertisement

ಯಾದಗಿರಿಯಲ್ಲಿ 74 ಮಿ. ಮೀ ಮಳೆಯಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ಇದರಿಂದಾಗಿ ಕೊಯಿಲೂರ ಬಳಿಯ ಹಳ್ಳ ಉಕ್ಕಿ ಹರಿಯುತ್ತಿದ್ದು ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ.

ಪಗಲಾಪುರ, ಮುಷ್ಟೂರು,ಮಲ್ಹಾರ್, ಶೆಟ್ಟಿಗೇರಾ, ಲಿಂಗೇರಿ, ಕೌಳೂರ, ಗೌಡಗೇರಾ ಹಾಗೂ ಸಾವೂರ ಮಾರ್ಗದ ಸಂಪರ್ಕ ಸ್ಥಗಿತಗೊಂಡು ಗ್ರಾಮಸ್ಥರು ಪರದಾಡುವಂತಾಗಿದ್ದು ಗ್ರಾಮಕ್ಕೆ ತೆರಳಲು 15-20 ಕಿ. ಮೀ ಸುತ್ತುವರಿದಿರುವ ಮೈಲಾಪೂರ ಮಾರ್ಗದಿಂದ ಬರಬೇಕಿದೆ.

ಅಧಿಕಾರಿಗಳು ಶೀಘ್ರವೇ ಕ್ರಮ ವಹಿಸಿ ತಾತ್ಕಾಲಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಶಾಶ್ವತ ಪರಿಹಾರವಾಗಿ ಸೇತುವೆ ಎತ್ತರಗೊಳಿಸಬೇಕು ಎನ್ನುವ ಒತ್ತಾಯ ಸ್ಥಳೀಯರದ್ದು.

Advertisement
Advertisement

Udayavani is now on Telegram. Click here to join our channel and stay updated with the latest news.

Next