ಹುಬ್ಬಳ್ಳಿ: ಕೊಂಚ ಬಿಡುವು ನೀಡಿದ್ದ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದೆ. ವರುಣಾರ್ಭಟಕ್ಕೆ ಐವರು ಬಲಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭಾಲ್ಕಿ ತಾಲೂಕಿನ ಖುದಾವನಪುರ ಗ್ರಾಮದ ರೈತ ಮಹಿಳೆ ಭಾಗ್ಯಶ್ರೀ ಭೀಮರಾವ ಮೇತ್ರೆ(32) ತಮ್ಮ ಮಗಳು ವೈಶಾಲಿ ಮೇತ್ರೆ (9) ಜತೆ ಹೊಲದಿಂದ ಕೆಲಸ ಮುಗಿಸಿ ಮನೆಗೆ ಮರಳುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಮೆಹಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರಾಕಾರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಕುರುಬತಹಳ್ಳಿ ಗ್ರಾಮದ ರೈತ ಬಸಣ್ಣ ಅಂಬಾಗೋಳ ಮೃತದೇಹ ಪತ್ತೆಯಾಗಿದೆ. ಭಟ್ಕಳ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಡೇìಶ್ವರದಲ್ಲಿ ಧಾರಾಕಾರ ಮಳೆ ನಡು ವೆಯೇ ಸಮುದ್ರಕ್ಕೆ ಇಳಿದಿದ್ದಇಬ್ಬರುಯುವಕರು ಮೃತಪಟ್ಟಿದ್ದು, ಇನ್ನಿಬ್ಬರನ್ನು ರಕ್ಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಾಸೂರು ಗ್ರಾಮದ ಮಂಜುನಾಥ (25) ಶವ ಪತ್ತೆಯಾಗಿದ್ದು, ಮತ್ತೂಬ್ಬ ಯುವಕ ಮಣಿ ಎಂಬಾತನಿಗಾಗಿಶೋಧಕಾರ್ಯಮುಂದುವರಿದಿದೆ. ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿದ್ದ ಚಂದನ ಬಿ.ಎಂ. ಹಾಗೂ ಪ್ರವೀಣಕುಮಾರ್ ಟಿ.ಪಿ. ಎಂಬುವವರನ್ನು ಸ್ಥಳೀಯರು ಹಾಗೂ ದೇವಸ್ಥಾನ ಸಿಬ್ಬಂದಿ ರಕ್ಷಿಸಿದ್ದಾರೆ. ಶಿವಮೊಗ್ಗದಿಂದ ಬಂದಿದ್ದ ನಾಲ್ವರು ಭಾನುವಾರ ಶಿವನ ದರ್ಶನ ಮಾಡಿಕೊಂಡು ಸಮುದ್ರಸ್ನಾನಕ್ಕೆಹೋಗುವತಯಾರಿಯಲ್ಲಿದ್ದರು. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇರುವುದರಿಂದ ಸಮುದ್ರ ಸ್ನಾನ ನಿಷೇಧಿಸಲಾಗಿತ್ತು. ಆದರೂ ನಾಲ್ವರು ಯುವಕರು ಕಲ್ಯಾಣ ಮಂಟಪದ ಹಿಂದೆ ಹೋಗಿ ಅಪಾಯಕಾರಿ ಸ್ಥಳದಲ್ಲಿ ಈಜಲು ಮುಂದಾಗಿದ್ದರು. ಅಲೆಗಳ ಹೊಡೆತಕ್ಕೆ ಸಿಲುಕಿದ ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಅಸುನೀಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ಕಡಲತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಧಾಮಣೆ (ಎಸ್) ಬೈಲೂರ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆಗೆ ಕಳೆದ ಹಲವು ತಿಂಗಳಿಂದ ರಜೆ ಇದ್ದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೀದರ ಜಿಲ್ಲೆಯಲ್ಲೂಮುಂಗಾರು ಮಳೆಆರ್ಭಟಿಸುತ್ತಿದ್ದು, ಎರಡು ದಿನಗಳಲ್ಲಿ 36.7 ಮಿಮೀ ಮಳೆಯಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಗ್ರಾಮೀಣ ಭಾಗದ ಹಲವು ಸಣ್ಣ ಸೇತುವೆಗಳು ಮುಳುಗಡೆಯಾಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಕಲ ಬುರಗಿ, ರಾಯಚೂರು, ಯಾದಗಿರಿ, ಧಾರವಾಡ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದೆ.