Advertisement

ಮೈಸೂರಲ್ಲಿ ಭಾರೀ ಮಳೆಗೆ ಬೆಚ್ಚಿದ ಜನ

12:19 PM May 06, 2020 | mahesh |

ಮೈಸೂರು: ನಗರದಲ್ಲಿ ಭಾನುವಾರ ರಾತ್ರಿ ಗುಡುಗು, ಮಿಂಚು ಸಹಿತ ಭಾರೀ ಗಾಳಿ-ಮಳೆಗೆ ನಗರದ ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುಳಿದ್ದು, ಅಪಾರ ಹಾನಿ ಸಂಭವಿಸಿದೆ. ಬೆಳಗ್ಗೆಯಿಂದ ಸಂಜೆಯಾವರಿಗೂ ಬಿರು ಬಿಸಿಲು ಇತ್ತಾದರೂ, ರಾತ್ರಿ 11 ಗಂಟೆಯಾಗು ತ್ತಿದ್ದಂತೆ ಜೋರು ಗಾಳಿ ಬೀಸಲು ಆರಂಭ ವಾಯಿತು. ಜೊತೆಯಲ್ಲಿ ಮಳೆಯೂ ಆರಂಭ ಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ರಾತ್ರಿ 11ರ ಸುಮಾರಿಗೆ ಆಗಮಿಸಿದ ಮಳೆ ಭಾರೀ ಗಾಳಿಯೊಂದಿಗೆ 11.30 ಗಂಟೆ ವರೆಗೂ ಸುರಿಯಿತು. ಬಳಿಕ, ಕೆಲ ಕಾಲ ಸಣ್ಣ ಹನಿಯೊಂದಿಗೆ ಮಳೆ ಮುಂದುವರಿಯಿತು. ಜೋರು ಮಳೆಸುರಿದ ಕಾರಣ ತಗ್ಗು ಪ್ರದೇಶಕ್ಕೆ ನೀರು ಹರಿಯಿತು. ನಡುವೆ ಗುಡುಗು ಸಿಡಿಲು ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿತು. ಹಲವೆಡೆ ಮರದ ಕೆಳಗೆ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಮರ ಮತ್ತು ಕೊಂಬೆಗಳು ಮುರಿದು ಬಿದ್ದ ಪರಿಣಾಮ ವಾಹನಗಳಿಗೆ ಹಾನಿಯಾಗಿದೆ. ಇನ್ನು ವಿದ್ಯುತ್‌ ತಂತಿಯ ಮೇಲೆ ಮರ ಬಿದ್ದು 50ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳ ಧರೆಗುರುಳಿವೆ.

Advertisement

ಮರದ ಕೊಂಬೆ ಬಿದ್ದು ಕಾರು, ಬೈಕ್‌, ಆಟೋ ನಜ್ಜು ಗುಜ್ಜಾಗಿದೆ. ವಿಜಯ ನಗರದ 3ನೇ ಹಂತದಲ್ಲಿ ಹಸುವಿನ ಮೇಲೆ ವಿದ್ಯುತ್‌ ಕಂಬ ಬಿದ್ದ ಪರಿಣಾಮ ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಿಧೆಡೆ ಮನೆಗಳ ಮೇಲೂ ಮರ ಬಿದ್ದು, ಮನೆಗಳಿಗೆ ಹಾನಿಯಾಗಿದೆ. ಮರಗಳು ಧರೆಗುರುಳಿದ ಪರಿಣಾಮ ಅಲ್ಲಿಯ ಬೀದಿ ಬದಿ ವ್ಯಾಪಾರಿಗಳ ಅಂಗಡಿ ಜಖಂಗೊಂಡಿವೆ. ವಿವಿಧ ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ನಂಜಮಳಿಗೆ ವೃತ್ತದ ಬಳಿ ಮರವೊಂದು ಬೇರು ಸಮೇತ ಬಿದ್ದ ಪರಿಣಾಮ ಕೆಳಗೆ ನಿಲ್ಲಿಸಿದ ಕಾರಿಗೆ ಹಾನಿಯಾಗಿದೆ. ಮುಂಜಾಗ್ರತೆಯಾಗಿ ನಗರದ ಕೆಲ ಭಾಗದಲ್ಲಿ ಕೆಲ ಕಾಲ ವಿದ್ಯುತ್‌ ಕಡಿತ ಮಾಡಲಾಗಿತ್ತು. ಇನ್ನು ರಸ್ತೆಯಲ್ಲಿ ಬಿದ್ದ ಮರಗಳ ಕೊಂಬೆಯನ್ನು ಪಾಲಿಕೆಯ ಅಭಯ ತಂಡ ಸೋಮವಾರ ತೆರವು ಗೊಳಿಸುವ ಕಾರ್ಯದಲ್ಲಿ ನಿರತರಾದರು. ಮಳೆಯಿಂದ ರಸ್ತೆಗಳು, ಮೋರಿ, ಒಳಚರಂಡಿ, ಮ್ಯಾನ್‌ ಹೋಲ್‌ಗ‌ಳಲ್ಲಿ ನೀರು ಉಕ್ಕಿ ಹರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next