Advertisement
ಇನ್ನಷ್ಟು ಮಳೆ ಸಾಧ್ಯತೆ: ಐಎಂಡಿಪಾಲ್ಗರ್ನ ಡಹಾಣುವಿನಲ್ಲಿ ಬುಧವಾರ ಮುಂಜಾನೆ 5.30ರ ವರೆಗೆ ಕಳೆದ 12 ಗಂಟೆಗಳ ಅವಧಿಯಲ್ಲಿ 350 ಮಿ.ಮೀ. ಮಳೆಯಾಗಿದೆ ಮತ್ತು ಥಾಣೆಯ ಕೆಲವು ಪ್ರದೇಶಗಳಲ್ಲಿ ಈ ಅವ ಧಿಯಲ್ಲಿ 150 ಮಿ.ಮೀ. ಗಿಂತ ಅಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಮಳೆಯಾಗಲಿದೆ ಎಂದು ಅದು ಮುನ್ಸೂಚನೆ ನೀಡಿದೆ. ಬುಧವಾರ ಸುರಿದ ಮಳೆ ಹಿನ್ನೆಲೆ ಚೆಂಬೂರು, ಪರೇಲ್, ಹಿಂದ್‌ಮಾತಾ, ಕುರ್ಲಾ, ವಡಾಲಾ ಮತ್ತು ಮುಂಬಯಿಯ ಇತರ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿರುವ ಪ್ರಕರಣ ನಡೆದಿದೆ. ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಪಾಲ್ಗರ್‌ನ ಪಶ್ಚಿಮ ರೈಲ್ವೇ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.
Related Articles
ಐಎಂಡಿಯ ವೆಬ್‌ಸೈಟ್‌ನ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹೊಸಳಿಕರ್ ಟ್ವೀಟ್ ಮಾಡಿ¨ªಾರೆ. ಮುಂದಿನ 24 ರಲ್ಲಿ ಇಡೀ ಕೊಂಕಣ ಪ್ರದೇಶದಲ್ಲಿ ಪ್ರತ್ಯೇಕವಾಗಿ ಅತಿ ಹೆಚ್ಚು ಮಳೆಯಾಗಬಹುದು. ಥಾಣೆ, ಮುಂಬಯಿ ಮತ್ತು ಪಾಲ^ರ್ ಸೇರಿದಂತೆ ಉತ್ತರ ಕೊಂಕಣದಲ್ಲಿ ಮಳೆಯು ಹೆಚ್ಚಿನ ಪರಿಣಾಮ ಬೀರಬಹುದು ಎಂದವರು ಹೇಳಿದ್ದಾರೆ.
Advertisement
ದಕ್ಷಿಣ ಮಧ್ಯ ಮಹಾರಾಷ್ಟ್ರ ಮತ್ತು ಅದರ ನೆರೆಯ ಮರಾಠವಾಡ ಪ್ರದೇಶದ ಭಾಗಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಇಲ್ಲಿನ ಪಶ್ಚಿಮ ಉಪನಗರಗಳಲ್ಲಿ 82.43 ಮಿ.ಮೀ. ಮಳೆಯಾಯಾಗಿದ್ದು, ಪೂರ್ವ ಉಪನಗರಗಳಲ್ಲಿ 69.11 ಮಿ.ಮೀ ಮತ್ತು ದ್ವೀಪ ನಗರದಲ್ಲಿ 45.38 ಮಿ.ಮೀ. ಮಳೆಯಾಗಿದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಪುಣೆ ಜಿಲ್ಲೆಯಲ್ಲಿ 59 ಮಿ.ಮೀ. ಮಳೆಯಾಗಿದೆ ಮತ್ತು ಮುಂದಿನ ಎರಡು ದಿನಗಳಲ್ಲಿ ಅದು ಮಧ್ಯಮದಿಂದ ಭಾರೀ ಮಳೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಅ ಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪುಣೆ ನಗರಕ್ಕೆ ನೀರು ಒದಗಿಸುವ ವರಸಾವ್, ಖಡಕ್ವಾಸ್ಲಾ, ಪಾರ್ನೆಟ್ ಮತ್ತು ಟೇಮ್ಗರ್ ಎಂಬ ನಾಲ್ಕು ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ ಎಂದವರು ತಿಳಿಸಿದ್ದಾರೆ.
ಪಾಲ್ಗರ್‌ನಲ್ಲಿ 364 ಮಿ.ಮೀ ಮಳೆಪಾಲ್ಗರ್ನ ಡಹಾಣುವಿನ ಹವಾಮಾನ ಕೇಂದ್ರವು ಬುಧವಾರ ಬೆಳಗ್ಗೆ 5.30ರ ವರೆಗೆ ಕಳೆದ 12 ಗಂಟೆಗಳ ಅವ ಧಿಯಲ್ಲಿ 364 ಮಿ.ಮೀ. ಮಳೆ ದಾಖಲಿಸಿದೆ ಎಂದು ಐಎಂಡಿ ಮುಂಬಯಿ ಕೇಂದ್ರದ ಉಪ ಮಹಾನಿರ್ದೇಶಕ ಕೆ.ಎಸ್. ಹೊಸಳಿಕರ್ ಹೇಳಿದ್ದಾರೆ. ಥಾಣೆಯ ಭಾಯಂದರ್‌ನಲ್ಲಿನ ಹವಾಮಾನ ಕೇಂದ್ರದಲ್ಲಿ 169 ಮಿ.ಮೀ. ಮಳೆಯಾಗಿದೆ ಮತ್ತು ಮೀರಾ ರೋಡ್‌ನಲ್ಲಿ 159 ಮಿ.ಮೀ. ಮಳೆಯಾಗಿದೆ, ಮುಂಬಯಿ ಮಹಾನಗರ ಪ್ರದೇಶದ (ಎಂಎಂಆರ್) ಭಾಗವಾಗಿರುವ ಥಾಣೆ ನಗರ, ಡೊಂಬಿವಲಿ ಮತ್ತು ಕಲ್ಯಾಣ್ ಪ್ರದೇಶಗಳಲ್ಲಿ ಇದೇ ಅವ ಧಿಯಲ್ಲಿ 120 ಮಿ.ಮೀ. ಗಿಂತ ಅಧಿಕ ಮಳೆಯಾಗಿದೆ ಎಂದವರು ತಿಳಿಸಿದ್ದಾರೆ.