Advertisement
ರಾಯಾಪುರ 33, ಬಿ.ಜಿ. ಕೆರೆಯಲ್ಲಿ 20, ರಾಂಪುರದಲ್ಲಿ 96.2 ಹಾಗೂ ದೇವಸಮುದ್ರದಲ್ಲಿ 51.2 ಮಿಮೀ ಮಳೆ ಸುರಿದಿದೆ. ಚಿನ್ನಹಗರಿ ನದಿ (ಜಿನಗಿ ಹಳ್ಳ )ದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ. ಪಟ್ಟಣದ ಕೋತಲಗೊಂದಿಕೆರೆ, ದವಳಪ್ಪನಕುಂಟೆ, ಕೂಗೆಗುಡ್ಡದ ಕೆರೆ, ಶ್ರೀನಿವಾಸ ನಾಯಕ ಬಡಾವಣೆ ಬಳಿಯ ಹೊಂಡಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಭರ್ತಿಯಾಗುವ ಹಂತ ತಲುಪಿವೆ. ತಾಲೂಕಿನ ಗುಂಡ್ಲೂರು ಕೆರೆ, ಕೋನಸಾಗರ ಕೆರೆ, ತುಪ್ಪದಕ್ಕನಹಳ್ಳಿ ಕೆರೆ, ಸಿದ್ದಾಪುರ ಕೆರೆ, ನಾಗಸಮುದ್ರ ಕೆರೆ, ದೇವಸಮುದ್ರದಕೆರೆ, ಜೆ.ಬಿ. ಹಳ್ಳಿ ಬಳಿಯ ಫಕ್ಕುರ್ತಿ ಕೆರೆ ಸೇರಿದಂತೆ ಇನ್ನಿತರ ಕೆರೆಗಳಿಗೆ ಭಾರಿ ಪ್ರಮಾಣದ ನೀರು ಹರಿದಿದೆ. ಚಿಕ್ಕೋಬನಹಳ್ಳಿಯ ಗ್ರಾಮದ ಮನೆಗಳಿಗೆ ನೀರು ಹರಿದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ 2, ಹಿರೇಕೆರೆಹಳ್ಳಿಯಲ್ಲಿ 2, ಸಿದ್ದಾಪುರ ಗ್ರಾಮದಲ್ಲಿ 3, ಕೆಳಗಿನಕಣಿವೆ ಗ್ರಾಮದಲ್ಲಿ 1, ರಾಂಪುರದಲ್ಲಿ 1, ವೀರಾಪುರದಲ್ಲಿ 2, ವೆಂಕಟಾಪುರದಲ್ಲಿ 2, ತಿಮ್ಮಲಾಪುರದಲ್ಲಿ 1 ಹಾಗೂ ಮುರುಡಿ ಗ್ರಾಮದಲ್ಲಿ 1 ಮನೆಗಳು ಸೇರಿದಂತೆ ಒಟ್ಟು 15 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಶಿರಸ್ತೇದಾರ ಏಳುಕೋಟಿ ತಿಳಿಸಿದ್ದಾರೆ. Advertisement
ಮೊಳಕಾಲ್ಮೂರಲ್ಲಿ ಭಾರೀ ಮಳೆ
11:13 AM Jul 26, 2020 | Suhan S |
Advertisement
Udayavani is now on Telegram. Click here to join our channel and stay updated with the latest news.