Advertisement

ಮಂಗಳೂರಿನಲ್ಲಿ ಧಾರಾಕಾರ ಮಳೆ

02:01 AM Jul 19, 2019 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಉಡುಪಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಿತ್ತು.

Advertisement

ಮಂಗಳೂರು ನಗರದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ 10.30ರ ವರೆಗೆ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಹೊರಗಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಸರಾಗವಾಗಿ ನೀರು ಹರಿಯದೆ ರೈಲು ನಿಲ್ದಾಣದ ಹೊರಗಡೆ ಮತ್ತು ಪ್ಲಾಟ್ಫಾರಂ ಒಳಗಡೆ ನೀರು ನುಗ್ಗಿತ್ತು. ಇದರಿಂದಾಗಿ ಪ್ರಯಾಣಿಕರು ಸೇರಿದಂತೆ ವಾಹನ ಸವಾರರು ಕಷ್ಟಪಟ್ಟರು. ರೈಲು ನಿಲ್ದಾಣದ ಒಳಗೆ ನೀರು ಸೋರುತ್ತಿರುವ ದೃಶ್ಯ ಕಂಡು ಬಂದಿತ್ತು.

ನಗರದ ಕದ್ರಿ ಬಳಿಯ ಪಿಂಟೋಸ್‌ ಲೇನ್‌ ಬಳಿ ಹಳೆ ಕಾಲದ ಮನೆಯ ಗೋಡೆ ಕುಸಿದಿದೆ. ಮಣ್ಣಗುಡ್ಡೆಯ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಿಂದ ಹೊರಬರುವ ನೀರಿನ ತೋಡಿಗೆ ಮಣ್ಣು ಹಾಕಿ ಮುಚ್ಚಿರುವುದರಿಂದ ಮಳೆ ನೀರು ಶಾಲೆಯ ಆವರಣದಲ್ಲಿ ಸಂಗ್ರಹಗೊಂಡು ತರಗತಿಗಳಿಗೂ ನುಗ್ಗಿತು. ವಿದ್ಯಾರ್ಥಿಗಳು ಕೆಲವು ಗಂಟೆ ಬೇರೆ ತರಗತಿಯಲ್ಲಿ ಕುಳಿತು ಪಾಠ ಕೇಳಿದರು.

ಮೂಡುಬಿದಿರೆಯಲ್ಲಿ ಆಗಾಗ ಮಳೆ, ಗುಡುಗು ಇತ್ತು. ವೇಣೂರು, ಮುಲ್ಕಿ, ಸುರತ್ಕಲ್, ಉಳ್ಳಾಲ, ಸುಬ್ರಹ್ಮಣ್ಯ, ಬಂಟ್ವಾಳ, ಬಿ.ಸಿ.ರೋಡ್‌, ಸುಳ್ಯ ಸೇರಿದಂತೆ ನಾನಾ ಕಡೆಗಳಲ್ಲಿ ಮಳೆಯಾದ ವರದಿಯಾಗಿದೆ.

ಉಡುಪಿ ಜಿಲ್ಲೆಯ ಶಿರ್ವ, ಕಾರ್ಕಳ, ಬೆಳ್ಮಣ್ಣಿನಲ್ಲಿ ಸ್ವಲ್ಪ ಮಳೆ ಯಾಗಿದೆ. ಉಳಿದಂತೆ ವಿವಿಧೆಡೆ ತುಂತುರು ಮಳೆಯಾಗಿದೆ.

Advertisement

ಕೊಡಗಿನಲ್ಲಿ ಹುಸಿಯಾದ ಮಳೆ ನಿರೀಕ್ಷೆ
ಮಡಿಕೇರಿ:
ಮುಂದಿನ 5 ದಿನಗಳ ಕಾಲಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾ ಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹುಸಿಯಾಗಿದ್ದು, ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದೆ. ಜನತೆ ಮಳೆಗಾಗಿ ಕಾತರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next