Advertisement
ಪಟ್ಟಣದಲ್ಲಿ ಹಾದುಹೋಗಿರುವ ಬಂಗಾರಪೇಟೆ-ಬೂದಿಕೋಟೆ ರಸ್ತೆಗೆ ಅಡ್ಡಲಾಗಿ ಸೇಟ್ ಕಾಂಪೌಂಡ್ ವಾರ್ಡ್‌ನಲ್ಲಿ ರೈಲ್ವೆ ಕ್ರಾಸಿಂಗ್ ಇದೆ. ಅದು ತೀರಾ ಕಿರಿದಾಗಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು 200 ಮೀಟರ್ ದೂರದಲ್ಲಿ ವಾಹನಗಳು ಸುಗಮವಾಗಿ ರೈಲ್ವೆ ಹಳಿ ದಾಟಲು ಅನುಕೂಲವಾಗುವಂತೆ ಇಲಾಖೆಯು ಹೊಸ ಕ್ರಾಸಿಂಗ್ ನಿರ್ಮಿಸಿದೆ. ಈ ಕ್ರಾಸಿಂಗ್‌ವರೆಗೆ ವಾಹನಗಳು ಬರಲು ರೈಲ್ವೆ ಹಳಿ ಪಕ್ಕದಲ್ಲೇ ಹೊಸದಾಗಿ ಎತ್ತರಿಸಿದ ರಸ್ತೆ ನಿರ್ಮಿಸಿದೆ. ಇದರಿಂದ ವಾರ್ಡ್‌ನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯಲ್ಲಿ ಬಿದ್ದ ಮಳೆ ನೀರು ನೇರ ರಸ್ತೆ ಪಕ್ಕದ ಮನೆಗಳಿಗೆ ನುಗ್ಗುತ್ತಿದೆ.
Related Articles
Advertisement
ಪುರಸಭೆ ಮಾಜಿ ಅಧ್ಯಕ್ಷ ಶಂಶುದ್ದೀನ್ ಬಾಬು ಮಧ್ಯಪ್ರವೇಶಿಸಿ, ಮಳೆಗಾಲ ಪ್ರಾರಂಭವಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲನೆ ಮಾಡಿದ್ದೇವೆ. ದಿನದ 24 ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಇದರ ಬಗ್ಗೆ ಯಾರೂ ಆತಂಕಪಡದೇ ಧೈರ್ಯದಿಂದ ಇರುತೆ ಮನವಿ ಮಾಡಿದ ಮೇಲೆ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಮತ್ತೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಬೂದಿಕೋಟೆ ಮಾರ್ಗದ ರಸ್ತೆಯನ್ನು ಜೆಸಿಬಿಯಿಂದ ಕೆಡವಿ ಸಂಪೂರ್ಣ ಮುಚ್ಚಿಸಲಾಗುವುದೆಂದು ಎಚ್ಚರಿಸಿದರು.
ಬಂಗಾರಪೇಟೆ: ತಾಲೂಕಿನಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಗುಡಿಸಲು ಸುಟ್ಟು ಕರಕಲಾಗಿದ್ದು, ಕೂದಲೆಳೆ ಅಂತರದಲ್ಲಿ ಕುಟುಂಬವೊಂದು ಬಚಾವ್ ಆಗಿರುವ ಘಟನೆ ತಾಲೂಕಿನ ಬೂದಿಕೋಟೆ ಹೋಬಳಿಯ ಮುತ್ತೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ತೀವ್ರ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನರ ಮನಕ್ಕೆ ಮಳೆ ತಂಪೆರೆಯಿತಾದರೂ ಗುರುವಾರ ರಾತ್ರಿ ಬಡಿದ ಸಿಡಲು ಕುಟುಂಬವೊಂದನ್ನು ಬೀದಿಪಾಲು ಮಾಡಿದೆ. ಗ್ರಾಮ ಹೊರವಲಯದ ತೋಟದಲ್ಲಿ ಪುಟ್ಟಪ್ಪ ಅವರು ಮಣ್ಣಿನ ಗೋಡೆ ನಿರ್ಮಿಸಿ, ತೆಂಗಿನ ಗರಿಹಾಕಿಕೊಂಡು ಗುಡಿಸಲನ್ನು ನಿರ್ಮಿಸಿಕೊಂಡಿದ್ದರು. ಗುರುವಾರ ರಾತ್ರಿ 10 ಗಂಟೆಯಲ್ಲಿ ಮಿಂಚು, ಗುಡುಗು ಸಿಡಿಲಿನೊಂದಿಗೆ ಮಳೆ ಆರ್ಭಟ ಜೋರಾಗಿದೆ. ಇದರಿಂದ ಆತಂಕಗೊಂಡ ಪುಟ್ಟಪ್ಪ ತನ್ನ ಕುಟುಂಬದ ಸದಸ್ಯರೊಂದಿಗೆ ಗುಡಿಸಲಿನಿಂದ ಹೊರಗೆ ಬಂದಿದ್ದಾರೆ. ಕೆಲಹೊತ್ತಿನಲ್ಲೇ ಸಿಡಿಲು ಬಡಿದು ಗುಡಿಸಲು ಸುಟ್ಟು ಕರಕಲಾಗಿದೆ. ಗುಡಿಸಲು ಪಕ್ಕದಲ್ಲಿ ಕಟ್ಟಿದ್ದ ಸೀಮೆಹಸುಗಳು ಪ್ರಾಣಾಪಾಯದಿಂದ ಪಾರಾಗಿವೆ.
ಗುಡಿಸಲಿನಲ್ಲಿದ್ದ ಅಡುಗೆ ಪಾತ್ರೆಗಳು, ಸಾಮಾನುಗಳು, 8 ಮೂಟೆ ರಾಗಿ, ಅಕ್ಕಿ, ದವಸ ಧಾನ್ಯ, ಬಟ್ಟೆ, ಟ್ರಂಕ್‌ನಲ್ಲಿದ್ದ 45 ಸಾವಿರ ರೂ. ಹಣ, ಕೋಳಿಗಳು ಸೇರಿ 2 ಲಕ್ಷ ರೂ. ನಷ್ಟು ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ, ಬೂದಿಕೋಟೆ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಷ್ಟಕ್ಕೆ ಒಳಗಾದ ಪುಟ್ಟಪ್ಪ ಕುಟುಂಬದ ವಸ್ತುಸ್ಥಿತಿಯನ್ನು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ lತಿಳಿಸುವುದಾಗಿ ಹೇಳಿದರು.