Advertisement
ರವಿವಾರ ಬೆಳಗ್ಗೆ ಕಾರ್ಕಳ ನಗರ ಸಹಿತ ವಿವಿಧೆಡೆ ಉತ್ತಮ ಮಳೆಯಾಗಿತ್ತು. ಆದರೆ ಸೋಮವಾರ ಮಳೆಯ ಪ್ರಮಾಣ ಕಡಿಮೆ ಇತ್ತು. ಬುಧವಾರ ಮತ್ತೆ ಸಿಡಿಲಿನ ಅಬ್ಬರದೊಂದಿಗೆ ಕೆಲವೆಡೆ ಉತ್ತಮ ಮಳೆ ಸುರಿದಿದೆ. ಕುಕ್ಕುಂದೂರು, ನಿಟ್ಟೆ, ಬಜಗೋಳಿ, ಮಾಳ, ಹೊಸ್ಮಾರು, ಅಜೆಕಾರು, ವರಂಗ, ಎಣ್ಣೆಹೊಳೆ, ಶಿರ್ಲಾಲು, ಅಂಡಾರು, ಕೆರ್ವಾಶೆ, ಕಡ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಇಲ್ಲೂ ಸಿಡಿಲಿನ ಅಬ್ಬರ ಜೋರಾಗಿತ್ತು.
ಹೆಬ್ರಿಯ ವಿವಿಧೆಡೆ ಅಪರಾಹ್ನ ಮೂರು ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉತ್ತಮ ಮಳೆಯಾಯಿತು. ಹೆಬ್ರಿ ತಾಲೂಕು ವ್ಯಾಪ್ತಿಯ ಹೆಬ್ರಿ, ಬೇಳಂಜೆ, ಕುಚ್ಚಾರು, ನಾಡಾ³ಲು, ಕಬ್ಬಿನಾಲೆ, ಶಿವಪುರ, ಮುದ್ರಾಡಿ, ವರಂಗ ಮೊದಲಾದ ಪ್ರದೇಶದಲ್ಲಿ ಗುಡುಗು ಸಹಿತ ಮಳೆ ಆಗಿದೆ. ಕೆಲವು ಪ್ರಮುಖ ರಸ್ತೆ ಬದಿಯಲ್ಲಿ ವ್ಯವಸ್ಥಿತ ಚರಂಡಿಯ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲೇ ನೀರು ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.
Related Articles
ಅಜೆಕಾರು ಪರಿಸರದಲ್ಲಿ ನಿರಂತರ ಭಾರೀ ಮಳೆ ಸುರಿದಿದೆ. ಅಪರಾಹ್ನ 2 ಗಂಟೆಗೆ ಆರಂಭವಾದ ಮಳೆ ಸಂಜೆ 5 ಗಂಟೆಯವರೆಗೂ ಸುರಿದಿತ್ತು. ಕೆಲವೆಡೆ ಗಾಳಿಯಿಂದ ಮರ ಉರುಳಿ ಸಣ್ಣ ಪುಟ್ಟ ಹಾನಿಗಳಾಗಿವೆ. ಸಿಡಿಲಿನ ಅಬ್ಬರರೂ ಜೋರಾಗಿತ್ತು. ಮರ ಬಿದ್ದಿದ್ದರಿಂದ ವಿದ್ಯುತ್ ಲೈನ್‌ಗೆ ಹಾನಿಯಾಗಿದ್ದು, ಸರಬರಾಜು ಸ್ಥಗಿತಗೊಂಡಿದೆ.
Advertisement
ವಿದ್ಯುತ್ ಸಂಪರ್ಕ ಕಡಿತವಿಪರೀತ ಮಿಂಚು, ಗುಡುಗು ಇದ್ದ ಕಾರಣ ಕಾರ್ಕಳದ ಹಲವೆಡೆ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿತ್ತು, ಬಿಎಸ್ಸೆನ್ನೆಲ್ ಲ್ಯಾಂಡ್ ಲೈನ್, ಇಂಟರ್‌ನೆಟ್ ಸಂಪರ್ಕ ಕೂಡ ಸ್ಥಗಿತಗೊಂಡಿತ್ತು. ಗುಡುಗಿನಿಂದಾಗಿ ಕಳೆದ ಮೂರು ದಿನಗಳಲ್ಲಿ ಸುಮಾರು 8ರಿಂದ 10 ಟ್ರಾನ್ಸ್ ಫಾರ್ಮರ್ ಕೆಟ್ಟು ಹೋಗಿವೆ ಎಂದು ಮೆಸ್ಕಾಂ ಎಇಇ ತಿಳಿಸಿದ್ದಾರೆ.