Advertisement
ಮಂಗಳೂರು ನಗರದಲ್ಲಿ ಗುರುವಾರ ಬೆಳಗ್ಗಿನಿಂದ ಉತ್ತಮ ಮಳೆಯಾಗಿದ್ದು, ಸಂಜೆ ವೇಳೆ ಮೋಡಕವಿದ ವಾತಾವರಣ ಇತ್ತು. ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಕಾಪು, ವೇಣೂರು, ಉಡುಪಿ ಜಿಲ್ಲೆಯ ಮಣಿಪಾಲ, ಕಾರ್ಕಳ, ಬ್ರಹ್ಮಾವರ, ಶಿರ್ವ, ಕಾಪು, ಬೆಳ್ಮಣ್ಣು, ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ.
ಉಪ್ಪಳ ಮೂಸೋಡಿಯಲ್ಲಿ ಕಡಲ್ಕೊರೆತ ಮುಂದುವರಿ ದಿದ್ದು ಮೊಹಮ್ಮದ್ ಮತ್ತು ಸಹೋದರಿ ನಫೀಸ ಅವರ ಮನೆಗಳು ಅಪಾಯದಂಚಿನಲ್ಲಿವೆ. ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇವರ ಒಟ್ಟು 28 ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಸಿಡಿಲು: ಮನೆಗೆ ಹಾನಿ
ನೀರ್ಚಾಲು: ಬುಧವಾರ ರಾತ್ರಿ ಸಿಡಿಲು ಬಡಿದು ಕುಂಟಿಕಾನ ಬಳಿಯ ಮನೆಯೊಂದು ಹಾನಿಗೀಡಾಗಿದೆ.
Related Articles
ಕಾಸರಗೋಡು/ ಮಣಿಪಾಲ: ಸದ್ಯದ ಪರಿಸ್ಥಿತಿಯಲ್ಲಿ ಮೋಡಗಳ ಚಲನೆಯಂತೆ ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಂಭವ ಇರುವುದರಿಂದ ಕೇರಳದಿಂದ ಮಹಾರಾಷ್ಟ್ರದ ತನಕ ಜೂ.21ರಂದು ಹವಾಮಾನ ಇಲಾಖೆಯು “ಆರೆಂಜ್ ಅಲರ್ಟ್’ ಘೋಷಿಸಿದೆ. ಶನಿವಾರ ಜೂ. 22ರಂದು ಕೇರಳ, ಕರ್ನಾಟಕ ಮತ್ತು ಗೋವಾ ತೀರಗಳಲ್ಲಿ ಗರಿಷ್ಠ ಜಾಗೃತಿಯ “ರೆಡ್ ಅಲರ್ಟ್’ ಘೋಷಣೆಯಾಗಿದೆ. ಜೂ. 23ರ ರವಿವಾರ “ಆರೆಂಜ್ ಅಲರ್ಟ್’ ಘೋಷಣೆಯಾಗಿದೆ.
Advertisement
ಆರೆಂಜ್ ಅಲರ್ಟ್ ಘೋಷಿಸಲಾದ ಕೆಲವು ಪ್ರದೇಶಗಳಲ್ಲಿ ಪ್ರಬಲ, ಅತಿ ಪ್ರಬಲ ಮಳೆ ಸುರಿಯುವ ಸಾಧ್ಯತೆಗಳಿವೆ. ಸರಕಾರಿ ವ್ಯವಸ್ಥೆ ಮತ್ತು ಸಾರ್ವಜನಿಕರು ಜಾಗೃತೆ ಪಾಲಿಸುವಂತೆ ಇಲಾಖೆ ತಿಳಿಸಿದೆ.
ಸಂಬಂಧಪಟ್ಟ ಇಲಾಖೆಗಳ ಸಿಬಂದಿ ಅಗತ್ಯವಿರುವ ಸಿದ್ಧತೆ ನಡೆಸುವಂತೆ, ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳನ್ನು ಆರಂಭಿಸುವಂತೆ ಕೇರಳ ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಆದೇಶ ನೀಡಿದೆ.