Advertisement
ಕಾಪು ಪರಿಸರದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದರೂ, ಮಳೆ ನೀರು ಹರಿದು ಹೋಗಲು ಮಾತ್ರಾ ಇನ್ನೂ ಚರಂಡಿ ನಿರ್ಮಾಣವಾಗಿಲ್ಲ. ಕಾಪು ಪೇಟೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯನ್ನು ಹೊರತು ಪಡಿಸಿದರೆ ಉಳಿದೆಲ್ಲೆಡೆ ಚರಂಡಿಯ ಕೊರತೆ ಎದ್ದು ಕಾಣುತ್ತಿದೆ.
ಕೊಪ್ಪಲಂಗಡಿ, ಮೂಳೂರು, ಉಚ್ಚಿಲ, ಎರ್ಮಾಳು, ಉಳಿಯಾರಗೋಳಿ, ಪಾಂಗಾಳ, ಕಟಪಾಡಿ ಸಹಿತ ಹೆಚ್ಚಿನ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಿ ಕೊಡುವ ಬಗ್ಗೆ ಚಿಂತನೆ ನಡೆಸದ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರುರಸ್ತೆಯಲ್ಲೇ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ತಗ್ಗು ಪ್ರದೇಶಗಳತ್ತ ಕೆಸರು ನೀರು
ಚರಂಡಿಯಿಲ್ಲದೇ ರಸ್ತೆ ಮತ್ತು ರಸ್ತೆ ಬದಿಯಲ್ಲೇ ಹರಿವ ಮಳೆ ನೀರು ನೇರವಾಗಿ ಹೆದ್ದಾರಿ ಬದಿಯಲ್ಲಿರುವ ಮನೆ, ಅಂಗಡಿ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಕೃಷಿ ಗದ್ದೆ, ತೋಟ, ಮಂದಿರಗಳ ಸಹಿತವಾಗಿ ತಗ್ಗು ಪ್ರದೇಶದತ್ತ ಹರಿದು ಬರುವಂತಾಗಿದೆ.
Related Articles
ಕಾಪು ಹೆದ್ದಾರಿ ಬದಿ ಆದ್ಯತೆಯಡಿ ಚರಂಡಿ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನವಯುಗ ಗುತ್ತಿಗೆದಾರರ ಒಂದು ತಂಡ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ನಿಯೋಜನೆಗೊಂಡಿದ್ದು, ಆದಷ್ಟು ಶೀಘ್ರ ಚರಂಡಿ ವ್ಯವಸ್ಥೆ ಸರಿಪಡಿಸಿಕೊಡಲಾಗುವುದು.
– ವಿಜಯಕುಮಾರ್
ನವಯುಗ ಕಂಪೆನಿ ಅಧಿಕಾರಿ
Advertisement