Advertisement

ಜೂ. 30ರ ಹೊತ್ತಿಗೆ ಭಾರೀ ಮಳೆ?

11:34 AM Jun 29, 2019 | sudhir |

ಹೊಸದಿಲ್ಲಿ: ಜೂನ್‌ 30ರಂದು ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಅದಕ್ಕೂ ಮುನ್ನ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶನಿವಾರ ದವರೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲೂ ವಿಪರೀತ ಮಳೆ ಸುರಿಯಲಿದೆ ಎಂದು ವರದಿ ಮಾಡಿದೆ.

Advertisement

ನೀರಿಲ್ಲದೆ ಕಂಗೆಟ್ಟಿದ್ದ ಚೆನ್ನೈಗೂ ಶನಿವಾರ ದವರೆಗೆ ಮಳೆ ಸುರಿಯಲಿದೆ. ಬುಧವಾರ ದಿಂದಲೇ ಅಲ್ಲಿ ಒಳ್ಳೆಯ ರೀತಿಯಲ್ಲಿ ಮಳೆ ಯಾಗುತ್ತಿದೆ. ವಾಯುಭಾರ ಕುಸಿತ ದಿಂದಾಗಿ ಈಶಾನ್ಯ ಭಾರತಕ್ಕೆ ಮಾನ್ಸೂನ್‌ ಪ್ರಯಾಣ ವೇಗಗೊಳ್ಳಲಿದೆ. ಸದ್ಯ ಈಶಾನ್ಯ ಭಾಗದತ್ತ ಮಾನ್ಸೂನ್‌ ವೇಗ ಕುಂಠಿತಗೊಂಡಿದ್ದು, ಮೂರು ದಿನಗಳ ನಂತರ ವಾಯುಭಾರ ಕುಸಿತವು ಮಾನ್ಸೂನ್‌ಗೆ ವೇಗ ನೀಡಲಿದೆ. ಇದೇ ವೇಳೆ ಹೊಸದಿಲ್ಲಿಗೆ ಜೂ.30ರ ಬಳಿಕವೇ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next