Advertisement

ಹುಣಸೂರು ತಾಲೂಕಿನಲ್ಲಿ ಭಾರಿ ಮಳೆ: ಎರಡು ಮನೆ ಸಂಪೂರ್ಣ ಹಾನಿ

10:12 AM Jul 06, 2022 | Team Udayavani |

ಹುಣಸೂರು: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹನಗೋಡು ಹೋಬಳಿಯ ಭರತವಾಡಿಯಲ್ಲಿ  ಮನೆ ಮೇಲ್ಚಾವಣಿ, ಗೋಡೆ ಕುಸಿದು ಬಿದ್ದಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ಭರತವಾಡಿಯ ಆದಿವಾಸಿ ಕುಮಾರಿ ಎಂಬುವವರ ಮನೆ ಮೇಲ್ಚಾವಣಿ ಸಹಿತ ಗೋಡೆ ಕುಸಿದು ಬಿದ್ದಿದ್ದು, ಮೇಲ್ಛಾವಣಿ ಬೀಳುವ ವೇಳೆ ಜೋರು ಶಬ್ದ ಉಂಟಾಗಿದ್ದರಿಂದ ಮನೆ ಮಂದಿ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ದವಸ-ಧಾನ್ಯ, ಪಾತ್ರೆಗಳು ಮಣ್ಣಿನಡಿ ಸಿಲುಕಿ ಸಂಪೂರ್ಣ ಹಾಳಾಗಿದೆ.

ಇದನ್ನೂ ಓದಿ: ಸ್ವಿಗ್ಗಿ, ಝೊಮ್ಯಾಟೋದಲ್ಲಿ ಸಿಗಲಿದೆ ಬೀದಿಬದಿ ಆಹಾರ

ಸೂಕ್ತ ಪರಿಹಾರಕ್ಕೆ ಮನವಿ

ಮಳೆ ಹಾನಿಯಿಂದ ಮನೆ ಹಾನಿಗೊಳಗಾದ ಕುಟುಂಬಕ್ಕೆ ತಾಲೂಕು ಆಡಳಿತದ ವತಿಯಿಂದ ತಕ್ಷಣವೇ ಪರಿಹಾರ ಕೊಡಿಸಿ  ಸಂಕಷ್ಟಕ್ಕೊಳಗಾದವರ ನೆರವಿಗೆ ಬರಬೇಕೆಂದು ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು. ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next